ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ)ಕಾಸರಗೋಡು ಶಾಖೆಯ ಮಹಿಳಾ ವೈದ್ಯರ ಒಕ್ಕೂಟದ (ಡಬ್ಲ್ಯುಡಿಡಬ್ಲ್ಯು) ಆಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಯಿತು.
ಐಎಂಎ ಹೌಸ್ ನಲ್ಲಿ ನಡೆದ ಸಭೆಯನ್ನು ಜಿಲ್ಲಾ ಮಹಿಳಾ ರಕ್ಷಣಾಧಿಕಾರಿ ಜ್ಯೋತಿ ಪಿ ಉದ್ಘಾಟಿಸಿದರು. ಅಧ್ಯಕ್ಷೆ ಡಾ. ರೇಖಾ ರೈ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಡಾ.ಯಶೋದಾ, ಡಾ. ವಾರುಣಿ, ವಿಜಯ ಲಕ್ಷ್ಮಿ ಅವರನ್ನು ಗೌರವಿಸಲಾಯಿತು. ಐಎಂಎ ಶಾಖೆಯ ಅಧ್ಯಕ್ಷ ಡಾ.ಗಣೇಶ್ ಮಯ್ಯ, ಕಾರ್ಯದರ್ಶಿ ಡಾ.ಟಿ.ಕಾಸಿಂ, ಜಿಲ್ಲಾ ಕನ್ವೀನರ್ ಡಾ. ನಾರಾಯಣ ನಾಯ್ಕ್, ಡಾ. ನಬೀಸಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಮಹಿಳಾ ಸಸ್ಯರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು. ಡಬ್ಲ್ಯುಡಿಡಬ್ಲ್ಯು ಕಾರ್ಯದರ್ಶಿ ಡಾ. ಸುಧಾ ಭಟ್ ವಂದಿಸಿದರು.
ಐಎಂಎ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆ
0
ಮಾರ್ಚ್ 12, 2023
Tags


