ಕಾಸರಗೋಡು: ಅಡುಗೆ ಅನಿಲ ಒಪ್ಪಂದ, ರಕ್ಷಣಾ ಒಪ್ಪಂದ, ಭಾರತೀಯ ವಿಮಾನ ನಿಲ್ದಾಣಗಳು, ಕಲ್ಲಿದ್ದಲು ಗಣಿಗಾರಿಕೆ ಪರವಾನಗಿ, ಸಾರ್ವಜನಿಕ ಮೂಲಸೌಕರ್ಯಗಳನ್ನು ಮೋದಿ ಸರ್ಕಾರ ಅದಾನಿ ಕಂಪನಿಗೆ ಧಾರೆಯೆರೆದುಕೊಟ್ಟಿರುವುದಾಗಿ ಕಾಂಗ್ರೆಸ್ ಕಾಸರಗೋಡು ಮಂಡಲ ಸಮಿತಿ ಆರೋಪಿಸಿದೆ. ಅದಾನಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕ ಸಂಸ್ಥೆಗಳಾದ ಎಸ್‍ಬಿಐ, ಎಲ್‍ಐಸಿ ಕಂಪೆನಿಗಳಿಗೆ ಠೇವಣಿಯನ್ನು ಅದಾನಿ ಕಂಪೆನಿಯಲ್ಲಿ ಠೇವಣಿಯಿರಿಸಲೂ ಮೋದಿ ಸರ್ಕಾರ ನಿರ್ದೇಶಿಸಿರುವುದಾಗಿ ಸಮಿತಿ ದೂರಿದೆ.
ಇಂತಹ ಧೋರಣೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಎಲ್.ಐ.ಸಿ ಕಚೇರಿ ಎದುರು ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಯಿತು. ಕೆಪಿಸಿಸಿ ಸದಸ್ಯ ಪಿ.ಎ.ಅಶ್ರಫ್ ಅಲಿ ಧರಣಿ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಖಾಲಿದ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಕರುಣ್ ತಾಪ, ಆರ್.ಗಂಗಾಧರಣಿ, ಕೆ.ವಾಸುದೇವನ್, ಮುನೀರ್ ಬಾಂಗೋಡ್, ಉಮೇಶ ಅಣಂಗೂರು, ಎಂ.ರಾಜೀವನ್ ನಂಬಿಯಾರ್, ಜಿ.ನಾರಾಯಣನ್,ಪುರುಷೋತ್ತಮನ್ ನಾಯರ್, ಕೆ.ಟಿ. ಸುಭಾಷ್ ನಾರಾಯಣನ್, ಖಾನ್ ಪೈಕ, ಹರೀಂದ್ರನ್, ಬಿ.ಎ. ಇಸ್ಮಾಯಿಲ್, ಪಿ ಕುಞÂಕೃಷ್ಣನ್ ನಾಯರ್, ಕೆ.ಪಿ. ನಾರಾಯಣನ್ ನಾಯರ್, ಹನೀಫ್ ಚೇರಂಗೈ, ಮುಂತಾದವರು ಉಪಸ್ಥಿತರಿದ್ದರು.
ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ, ಧರಣಿ
0
ಮಾರ್ಚ್ 12, 2023
Tags





