HEALTH TIPS

ಗೋವಾದ ಎಲ್ಲಾ ಔಷಧ ಅಂಗಡಿಗಳಲ್ಲೂ ಜನೌಷಧ ವಿಭಾಗ ಕಡ್ಡಾಯ

 

          ಪಣಜಿ: ಗೋವಾದ ಎಲ್ಲಾ ಔಷಧಾಲಯಗಳಲ್ಲಿ ಜನೌಷಧ ವಿಭಾಗಗಳನ್ನು ಕಡ್ಡಾಯವಾಗಿ ತೆರೆಯುವಂತೆ ಮಾಡಲಾಗುವುದು. ಇದರಿಂದಾಗಿ ಸಮಾಜದ ಎಲ್ಲಾ ವರ್ಗಗಳ ಜನರಿಗೂ ಉತ್ತಮ ಗುಣಮಟ್ಟದ ಔಷಧಗಳು ದೊರೆಯುತ್ತವೆ ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಅವರು ಸೋಮವಾರ ತಿಳಿಸಿದರು.

                     ಈ ಕುರಿತು ಆರೋಗ್ಯ ಇಲಾಖೆಯು 48 ಗಂಟೆಯೊಳಗೆ ಸುತ್ತೋಲೆ ಹೊರಡಿಸಲಿದೆ. ಗೋವಾದ ಆಹಾರ ಮತ್ತು ಔಷಧ ನಿಯಂತ್ರಕ (ಎಫ್‌ಡಿಎ) ಇದರ ಮೇಲ್ವಿಚಾರಣೆ ಹೊರಡಿಸಲಿದೆ ಎಂದು ಎಂದು ರಾಣೆ ಅವರು ಜನೌಷಧ ದಿನದ ಅಂಗವಾಗಿ ಟ್ವೀಟ್‌ ಮಾಡಿದ್ದಾರೆ.

                'ಗೋವಾದ ಎಲ್ಲಾ ಔಷಧ ಅಂಗಡಿಗಳಲ್ಲಿ ಪ್ರತ್ಯೇಕವಾಗಿ ಜನೌಷಧ ವಿಭಾಗಗಳನ್ನು ತೆರೆಯುವಂತೆ ಸರ್ಕಾರವು ಒಮ್ಮತದ ನಿರ್ಧಾರ ತೆಗೆದುಕೊಂಡಿದೆ. ಎಲ್ಲರಿಗೂ ಉತ್ತಮ ಗುಣಮಟ್ಟದ ಔಷಧ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆ ಇದಾಗಿದ್ದು, ಈ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತೇವೆ' ಎಂದು ಟ್ವೀಟ್‌ ಅವರು ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries