ಬದಿಯಡ್ಕ: ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ನೀರ್ಚಾಲು ಪೇಟೆಯ ನಾಗರಿಕರ ಹಾಗೂ ವ್ಯಾಪಾರಿಗಳ ಬಹುದಿನಗಳ ಬೇಡಿಕೆ ಒಂದು ರಾಷ್ಟ್ರೀಕೃತ ಬ್ಯಾಂಕ್ ಸಾಕಾರತೆಯ ಸಾಧ್ಯತೆಯತ್ತ ಮುಂದುವರಿದಿದೆ.
ಈ ಅವಶ್ಯಕತೆಯನ್ನು ಮನಗಂಡು ಕೇರಳ ವ್ಯಾಪಾರಿ ವ್ಯವಸಾಯ ಏಕೋಪನ ಸಮಿತಿಯು ಕೇಂದ್ರ ಸರ್ಕಾರದ ಅಧಿಕೃತರಿಗೆ ಹಾಗೂ ಸಚಿವರಿಗೆ ಮನವಿಯನ್ನು ಸಲ್ಲಿಸಿತ್ತು. ಇದರೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಗಳಿಗೆ ಬೇಡಿಕೆಗಳನ್ನು ಸಲ್ಲಿಸಲಾಯಿತು. ಅಲ್ಲದೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ಪದಾಧಿಕಾರಿಗಳು ಅಧ್ಯಕ್ಷರ ನೇತೃತ್ವದಲ್ಲಿ ಭೇಟಿ ನೀಡಿ ರೀಜನಲ್ ಮ್ಯಾನೇಜರ್ ಧನಂಜಯಮೂರ್ತಿ ಅವರ ಜೊತೆÉ ಮಾತುಕತೆ ನಡೆಸಿ ಮನವಿಯನ್ನು ಸಲ್ಲಿಸಿತ್ತು. ಪ್ರಕ್ರಿಯೆಗಳ ಫಲವಾಗಿ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ತಂಡ ನೀರ್ಚಾಲಿಗೆ ಭೇಟಿ ನೀಡಿ, ವ್ಯಾಪಾರಿ ಘಟಕದ ಅಧ್ಯಕ್ಷರ ಸಮಕ್ಷಮದಲ್ಲಿ ಸ್ಥಳ ಪರಿಶೀಲನೆ ನಡೆಸಿದೆ. ಅಲ್ಲದೆ ಸಕಾರಾತ್ಮಕ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುವ ಭರವಸೆಯನ್ನು ನೀಡಿರುತ್ತಾರೆ. ಈ ಸಂದರ್ಭ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಸತ್ಯಶಂಕರ ಭಟ್, ಮಹಾಲಿಂಗ ಉಪ್ಪಿನೆ, ಮಹೇಶ್ ವಳಕ್ಕುಂಜ ನಿಯೋಗದಲ್ಲಿದ್ದರು.
ನೀರ್ಚಾಲು ಜನತೆಯ ಕನಸು ನನಸಾಗುವತ್ತ
0
ಮಾರ್ಚ್ 14, 2023




.jpg)
