HEALTH TIPS

ಭಜನೆಯಿಂದ ಭಗವಂತನ ಸಾಕ್ಷಾತ್ಕಾರ : ಎಡನೀರು ಶ್ರೀ


               ಬದಿಯಡ್ಕ: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಆರಂಭಗೊಂಡ ಭಜನೆ, ತಬಲ, ಹಾರ್ಮೋನಿಯಂ, ಕೀಬೋರ್ಡ್ ತರಗತಿಯ ಉದ್ಘಾಟನಾ ಸಮಾರಂಭÀದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಆಶೀರ್ವಚನ ನೀಡಿದರು.
              ಸಂಗೀತ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಸಂಗೀತಾರ್ಚನೆ ನಡೆಸಿದರು. ಗುರುಗಳಾದ ಶಿವಾನಂದ ಉಪ್ಪಳ ತರಗತಿಯ ಶುಭಾರಂಭ ಮಾಡಿದರು. ಎಡನೀರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮಾಧÀವ ಹೇರಳ ಕಳೇರಿ ಮೊದಲಾದವರು ಉಪಸ್ಥಿತರಿದ್ದರು.
         ಭಗವಂತನನ್ನು ನೇರವಾಗಿ ಒಲಿಸಿಕೊಳ್ಳುವ ಸುಲಭ ಮಾರ್ಗವೇ ಭಜನೆ. ಭಕ್ತಿ ಭಾವದ ಭಜನೆಯಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ದೇವರು ಎಂಬ ಆ ಅದ್ಭುತ ಅಗಮ್ಯ ಚೈತನ್ಯಕ್ಕೆ ನಮ್ಮನ್ನೇ ನಾವು ಅರ್ಪಿಸಿಕೊಂಡು ಮಾಡುವ ಆರಾಧನೆ, ಪೂಜೆ, ಭಜನೆಯ ನೆಲೆಯೇ ಭಕ್ತಿ. ಕಲಿಯುಗದಲ್ಲಿ ಎಲ್ಲಾ ವರ್ಗದವರಿಗೂ ದೇವರನ್ನು ಒಲಿಸಿಕೊಳ್ಳಲು ಭಜನೆಯಿಂದ ಸಾಧ್ಯ. ನಾಮ ಸಂಕೀರ್ತನೆಗೆ ಇರುವ ಶಕ್ತಿ ಅಪಾರವಾದುದು. ಇದನ್ನು ಹಾಡುವುದರಿಂದಲೂ, ಕೇಳುವುದರಿಂದಲೂ ಜೀವನದಲ್ಲಿ ನೆಮ್ಮದಿ ಮನ:ಶಾಂತಿ ದೊರೆಯುವುದು ಎಂದು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
             ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಎಡನೀರು ಆಶ್ರಯದಲ್ಲಿ ಶ್ರೀ ಭಕ್ತವೃಂದ ಎಡನೀರು ಸಹಯೋಗದಲ್ಲಿ ಭಜನೆ, ತಬಲ, ಹಾರ್ಮೋನಿಯಂ, ಕೀಬೋರ್ಡ್ ತರಗತಿಯ ಉದ್ಘಾಟನೆ ಸಮಾರಂಭವು ಶ್ರೀ ಎಡನೀರು ಮಠದ ಶ್ರೀ ಕೃಷ್ಣ ರಂಗಮಂಟಪದಲ್ಲಿ ನಡೆಯಿತು. ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಭವಾನಿಶಂಕರ ಮಾಸ್ತರ್ ಕಾಪುಮೂಲೆ, ಶ್ರೀ ಭಕ್ತವೃಂದ ಎಡನೀರು ಅಧ್ಯಕ್ಷ ಸೋಮಶೇಖರ ಚಾಪಾಡಿ, ಶ್ರೀ ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಕನ್ನಡಿಪಾರೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋವಿಂದ ಭಟ್ ಪೆರಡಾಲಮೂಲೆ, ಎಡನೀರು ಸ್ವಾಮೀಜೀಸ್ ಹೈಸ್ಕೂಲು ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ ಟೀಚರ್ ಉಪಸ್ಥಿತರಿದ್ದರು. ಪ್ರಶಾಂತ ಕಲ್ಲುಗದ್ದೆ ಸ್ವಾಗತಿಸಿ,ಜಗನ್ನಾಥ ಕೆಮ್ಮಂಗಯ ವಂದಿಸಿದರು. ಶ್ರೀ ಭಾರತೀ ಬಾಲಗೋಕುಲ ಸದಸ್ಯರು ಭಜನೆಯಲ್ಲಿ ಭಾಗವಹಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries