ಕಾಸರಗೋಡು:| ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮ ಪಂಚಾಯಿತಿ, ನಗರಸಭಾ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ವಿತರಣೆಗಾಗಿ ಪಂಚಾಯಿತಿ ಯಾ ನಗರಸಭೆಗಳು ನಿಯೋಜಿಸಿರುವ ಟ್ಯಾಂಕರ್ ಟ್ರಕ್‍ಗಳಿಗೆ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲು ಅನುಮೋದಿತ ಸಂಸ್ಥೆಗಳಿಂದ ಬಿಡ್ ಆಹ್ವಾನಿಸಲಾಗಿದೆ.
ಇವುಗಳು ಜಿಲ್ಲಾ ಕಚೇರಿ, ನಗರಸಭೆ ಮತ್ತು ಪಂಚಾಯಿತಿ ಮಟ್ಟದಲ್ಲಿ ಇವುಗಳು ನಿಗಾ ಇರಿಸುವ ರೀತಿಯಲ್ಲಿ ವ್ಯವಸ್ಥೆ ಏರ್ಪಡಿಸಬೇಕಾಗಿದೆ. ವಾಹನಕ್ಕೆ ಜಿಪಿಎಸ್ ಅಳವಡಿಸಲು ತಗಲುವ ವೆಚ್ಚವನ್ನು ಕೊಟೇಶನ್ ಒಳಗೊಂಡಿದ್ದು, ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆಗಳು ಇದನ್ನು ಅಳವಡಿಸಲಿವೆ.
ನಗರಸಬೆ, ಪಂಚಯಿತಿಗಳು ನಿಯೋಜಿಸುವ ವಹನಗಳಿಗೆ ಜಿಪಿಎಸ್ ಅಳವಡಿಸಲಿರುವ ಮೊತ್ತ, ಜಿಪಿಎಸ್‍ನ ಮಾಸಿಕ ಬಾಡಿಗೆ ಕೊಟೇಶನ್‍ನಲ್ಲಿ ನಮೂದಿಸಬೇಕಾಗಿದೆ. ಮಾಸಿಕ ಬಾಡಿಗೆ, ಉಲ್ಲೇಖಿಸಿದ ದರ ಒಳಗೊಂಡಂತೆ ಎಲ್ಲಾ ವೆಚ್ಚಗಳು, ತೆರಿಗೆ ಮತ್ತು ಕಾರ್ಮಿಕ ವೆಚ್ಚಗಳನ್ನು ಒಳಗೊಂಡಂತೆ ಒಟ್ಟು ಮೊತ್ತವಾಗಿರಬೇಕು.
ಅಂಗೀಕರಿಸಲಾಗುವ ದರದಲ್ಲಿ ಜಿಪಿಎಸ್ ಒದಗಿಸಬೇಕಾಗಿದ್ದು, ಈ ಮೊತ್ತ ಆಯಾ ಸ್ಥಳೀಯಾಡಳಿತ ಸಂಸ್ಥೆಯಿಂದ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಗುರುತಿಸಲಾದ ಕೇಂದ್ರಗಳಲ್ಲಿ, ಗ್ರಾಮ ಪಂಚಾಯಿತಿ ಯಾ ನಗರಸಭೆಯಲ್ಲಿ ನೇರವಗಿ ಹಾಜರಗಿ ಜಿಪಿಎಸ್ ಅಳವಡಿಸಲು ವ್ಯವಸ್ಥೆ ಕೈಗೊಳ್ಳಬೇಕಾಗಿದೆ.
ಬಿಡ್‍ಗಳನ್ನು ಮುಚ್ಚಿದ ಲಕೋಟೆಯಲ್ಲಿ ಜಂಟಿ ನಿರ್ದೇಶಕರ ಕಛೇರಿ, ಸ್ಥಳೀಯಾಡಳಿತ ಇಲಾಖೆ, ಸಿವಿಲ್ ಸ್ಟೇಷನ್ ಕಾಂಪ್ಲೆಕ್ಸ್, ಕಾಸರಗೋಡು ಇವರಿಗೆ ಮಾರ್ಚ್ 20 ರಂದು ಮಧ್ಯಾಹ್ನ 2 ಗಂಟೆಯೊಳಗೆ ಸಲ್ಲಿಸಬೇಕು. 20ರಂದು ಮಧ್ಯಾಹ್ನ 3 ಗಂಟೆಗೆ ಉಪಸ್ಥಿತರಿರುವ ಬಿಡ್‍ದಾರರ ಉಪಸ್ಥಿತಿಯಲ್ಲಿ ಲಭ್ಯವಿರುವ ಕೊಟೇಶನ್‍ಗಳನ್ನು ತೆರೆದು ಪರಿಶೀಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಶುದ್ಧಕುಡಿಯುವ ನೀರಿನ ಪೂರೈಕೆ-ವಾಹನಗಳಿಗೆ ಜಿಪಿಎಸ್ ಅಳವಡಿಕೆಗೆ ಟೆಂಡರ್ ಆಹ್ವಾನ
0
ಮಾರ್ಚ್ 14, 2023




