ಕಾಸರಗೋಡು: ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆ ಅವರ 'ಕಥನ ಕಾರಣ' ಅಧ್ಯಯನ ಕೃತಿ ಬಿಡುಗಡೆ ಸಮಾರಂಭ ಮಾ. 20ರಂದು ಮಧ್ಯಾಹ್ನ 2 ಘಂಟೆಗೆ ಪೆರ್ಲದ ನಾಲಂದ ಮಹಾ ವಿದ್ಯಾಲಯದಲ್ಲಿ ಜರುಗಲಿದೆ.
ನಿವೃತ್ತ ಶಿಕ್ಷಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪುಸ್ತಕ ಬಿಡುಗಡೆಗೊಳಿಸುವರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ನಾಲಂದ ಮಹಾವಿದ್ಯಾಲಯ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಜಿ. ಶ್ರೀಧರ್ ಕೃತಿ ವಿಮರ್ಶೆ ನಡೆಸುವರು. ಜಿಲ್ಲಾ ಕನ್ನಡ ಲೇಖಕರ ಸಂಘದ ಗೌರವಾಧ್ಯಕ್ಷ ಡಾ. ರಮಾನಂದ ಬನಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ವಿಶೇಷ ಆಮಂತ್ರಿತರ ಜೊತೆ ಮುಕ್ತ ಸಂವಾದ ಮತ್ತು ಪುಸ್ತಕ ಪ್ರದರ್ಶನ ನಡೆಯುವುದು.
20ರಂದು 'ಕಥನ ಕಾರಣ' ಕ್ರತಿ ಬಿಡುಗಡೆ
0
ಮಾರ್ಚ್ 14, 2023





