ಕಾಸರಗೋಡು: 2023 ಆಗಸ್ಟ್ 10 ರಂದು ನೂರನೇ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ಸಂಗೀತ ಕ್ಷೇತ್ರದ ಸಾಧಕ, ಮೃದಂಗ ವಿದ್ವಾನ್ ಬೆಳಿಂಜ ಗುತ್ತು ಬಾಬುರೈ ಕೋಟೆಕಾರ್ ಅವರನ್ನು ಬಂಟರ ಸಂಘದ ಮಧೂರು ಪಂಚಾಯತ್ ಸಮಿತಿ ವತಿಯಿಂದ ಗೌರವಿಸಲಾಯಿತು.
ಶತಾಯುಷಿ ಬಾಬು ರೈಗಳ ಕೂಡ್ಲು ಸೂರ್ಲುವಿನಲ್ಲಿರುವ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ರಾಮಕೃಷ್ಣ ಆಳ್ವ ಮತ್ತು ಕಾರ್ಯದರ್ಶಿ ಗಣೇಶ್ ರೈ ಗಳ ನೇತೃತ್ವದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು. ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು,ಆಶೋಕ ರೈ ಸೂರ್ಲು,ರೋಹಿತಾಕ್ಷಿ ಬಿ ರೈ,ಉದಯಕುಮಾರ್ ರೈ, ಬಾಲಕೃಷ್ಣ ರೈ ಗಂಗೆ, ಉಮೇಶ್ ಶೆಟ್ಟಿಸೂರ್ಲು, ಬಾಬು ರೈ ಅಗವರ ಪುತ್ರರಾದ ಶ್ರೀಧರ ರೈ, ನಾರಾಯಣ ರೈ ಮತ್ತು ಸೊಸೆ ಗುಲಾಬಿ ರೈ ಉಪಸ್ಥಿತರಿದ್ದರು.
ಶತಾಯುಷಿ, ಹಿರಿಯ ಮೃದಂಗ ವಿದ್ವಾನ್ ಕೋಟೆಕಾರು ಬಾಬು ರಐ ಅವರಿಗೆ ಗೌರವಾರ್ಪಣೆ
0
ಮಾರ್ಚ್ 14, 2023





