ಕುಂಬಳೆ : ಕೋಟೆಕ್ಕಾರು ರಾಜ್ಯಂದೈವ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಶ್ರೀ ಧೂಮಾವತೀ ದ್ಯವದ ಧರ್ಮನೇಮ ಸೋಮವಾರ ಆರಂಭಗೊಂಡಿತು. ಬೆಳಗ್ಗೆ ಗಣಪತಿ ಹೋಮ, ನಾಗತಂಬಿಲ, ರಕ್ತೇಶ್ವರೀ ತಂಬಿಲ, ದೈವ ದೀಪಾರಾಧನೆ, ಹರಿಸೇವೆ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ, ತುಳು ಸಾಮಾಜಿಕ-ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
7ರಂದು ಬೆಳಗ್ಗೆ 8ರಿಂದ ಶ್ರೀ ಧೂಮಾವತೀ ದೈವದ ಧರ್ಮನೇಮ, ಸಂಜೆ ಕೊರತ್ತಿ, ಕಲ್ಲುರ್ಟಿ ದೈವ ಕೋಲ, ರಾತ್ರಿ ಕಲ್ಲಾಲ್ತಾಯ ಗುಳಿಗ ಕೋಲ ನಡೆಯುವುದು. 8ರಂದು ಬೆಳಗ್ಗೆ ದೈವ ತಂಬಿಲ, 9ರಂದು ಬೆಳಗ್ಗೆ 9ಕ್ಕೆ ಶುದ್ಧಿ ಕಲಶ, ದೀಪಾರಾಧನೆ ನಡೆಯುವುದು.
ಕುಂಬಳೆ ಕೋಟೆಕ್ಕಾರು ಶ್ರೀ ಧೂಮಾವತೀ ದೈವ ನೇಮ ಆರಂಭ
0
ಮಾರ್ಚ್ 06, 2023
Tags




