ಕಾಸರಗೋಡು: ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧೀನದಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಫೆನ್ಸಿಂಗ್ ಅಕಾಡೆಮಿಗೆ (ಖೇಲೋ ಇಂಡಿಯಾ ಸ್ಕೀಮ್) ಕ್ರೀಡಾಪಟುಗಳಿಗೆ ಅವಶ್ಯಕವಾದ ಫೆನ್ಸಿಂಗ್ ಕ್ರೀಡಾ ಸಲಕರಣೆಗಳು ಒದಗಿಸುವುದಕ್ಕಾಗಿ ಕ್ವೋಟೇಷನ್ ಆಹ್ವಾನಿಸಲಾಗಿದೆ.
ಕ್ವೋಟೇಷನ್ ವಿವರಗಳು ಜಿಲ್ಲಾ ಕ್ರೀಡಾ ಮಂಡಳಿಯ ವೆಬ್‍ಸೈಟ್‍ನಲ್ಲಿ ಲಭ್ಯವಿದ್ದು, ಕೊಟೇಶನ್ ಸಲ್ಲಿಸಲು ಮಾ. 15ರ (ಬೆಳಗ್ಗೆ 10ರ ವರೆಗೆ)ಕೊನೆಯ ದಿನಾಂಕ ವಾಗಿರುತ್ತದೆ. ಕ್ವೋಟೇಷನ್ ಅದೇ ದಿನ ಮಧ್ಯಾಹ್ನ 12.30ಕ್ಕೆ ಜಿಲ್ಲಾ ಕ್ರೀಡಾ ಮಂಡಳಿಯ ಕಚೇರಿಯಲ್ಲಿ ತೆರೆದು ಪರಿಶೀಲಿಸಲಾಗುವುದು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕಾಸರಗೋಡು ಜಿಲ್ಲಾ ಪಂಚಾಯಿತಿ ಕಚೇರಿಯ ನೋಟೀಸ್ ಬೋರ್ಡ್, ಜಿಲ್ಲಾ ಮಾಹಿತಿ ಕಾರ್ಯಾಲಯ ಜಿಲ್ಲಾಧಿಕಾರಿ ಕಚೇರಿ, ಚೆಂಗಳ ಗ್ರಾಮ ಪಂಚಾಯಿತಿ ಕಚೇರಿ ನೋಟೀಸ್ ಬೋರ್ಡ್, ಮಧೂರು ಪಂಚಾಯತ್ ಆಫೀಸ್ ನೋಟೀಸ್ ಬೋರ್ಡ್ ಎಂಬಿವುಗಳಲ್ಲಿ ಪ್ರದರ್ಶಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04 9 9 4 2 5 5 52 1)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಫೆನ್ಸಿಂಗ್ ಸಲಕರಣೆಗಾಗಿ ಕ್ವೋಟೇಷನ್ ಆಹ್ವಾನ
0
ಮಾರ್ಚ್ 06, 2023
Tags




