ಕಾಸರಗೋಡು: ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ಯುವಕರ ಶಕ್ತಿ ಮತ್ತು ಸಾಮಥ್ರ್ಯವನ್ನು ಬಳಸಿಕೊಳ್ಳುವುದು ಮತ್ತು ಆರೋಗ್ಯ, ನೈರ್ಮಲ್ಯ, ಸಾಕ್ಷರತೆ, ಲಿಂಗ ಸಮಾನತೆ ಮತ್ತು ಇತರ ಸಾಮಾಜಿಕ ಸಮಸ್ಯೆಗಳ ಕ್ಷೇತ್ರಗಳಲ್ಲಿ ಜಾಗೃತಿ ಯಾ ಅಭಿಯಾನ ಕಾರ್ಯಕ್ರಮಗಳನ್ನು ನಡೆಸುವುದರ ಜತೆಗೆ ಯುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕ್ರೋಢೀಕರಿಸುವಲ್ಲಿ ನೆಹರು ಯುವ ಕೇಂದ್ರಕ್ಕೆ ಸಹಾಯ ಮಾಡಲು ರಾಷ್ಟ್ರೀಯ ಯುವ ಸ್ವಯಂಸೇವಕರನ್ನು ಆಯ್ಕೆ ಮಾಡಲಾಗುತ್ತಿದೆ.
ಅಭ್ಯರ್ಥಿಗಳಿಗೆ ಎಸ್ಸೆಸೆಲ್ಸಿ ಉತ್ತೀರ್ಣರಾಗಿರುವುದು ಕನಿಷ್ಠ ಶೈಕ್ಷಣಿಕ ಅರ್ಹತೆಯಾಗಿದ್ದು, ಉನ್ನತ ಶಿಕ್ಷಣ ಅರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ವಯಸ್ಸಿನ ಮಿತಿ: 1ನೇ ಏಪ್ರಿಲ್ 2023 ರಂದು 18 ವರ್ಷ ತುಂಬಿದ್ದು, 29 ವರ್ಷವಾಗಿರುತ್ತದೆ. ರೆಗ್ಯುಲರ್ ವಿದ್ಯಾರ್ಥಿಗಳು ಮತ್ತು ಇತರೆ ಉದ್ಯೋಗದಲ್ಲಿರುವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕಳೆದ ವರ್ಷ ಅರ್ಜಿ ಸಲ್ಲಿಸಿ ಅವಕಾಶ ಸಿಗದಿರುವವರು ಈ ವರ್ಷ ಅರ್ಜಿ ಸಲ್ಲಿಸಬಹುದಾಗಿದೆ.
ಗರಿಷ್ಠ ಎರಡು ವರ್ಷಗಳ ಅವಧಿಗೆ ನೇಮಕಾತಿ ನಡೆಯಲಿದ್ದು, ಮಾಸಿಕ 5ಸಾವಿರ ರೂ. ಸಹಾಯಧನ ನೀಡಲಾಗುವುದು. ಈ ಹುದ್ದೆಯನ್ನು ಶಾಶ್ವತ ಉದ್ಯೋಗಕ್ಕಾಗಿ ಕಾನೂನು ಬದ್ಧವಾಗಿ ಅಧಿಕೃತಗೊಳಿಸಲಾಗುವುದಿಲ್ಲ. ವೆಬ್‍ಸೈಟ್ ತಿತಿತಿ.ಟಿಥಿಞs.ಟಿiಛಿ.iಟಿ ಮೂಲಕ ಮಾ.9ರೊಳಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಗಿದೆ.
ಯುವ ಸ್ವಯಂಸೇವಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
0
ಮಾರ್ಚ್ 07, 2023
Tags



