HEALTH TIPS

ಭಾರತದಲ್ಲಿ ಹರಡುತ್ತಿದೆ h3n2 ವೈರಸ್: ಇದರ ಲಕ್ಷಣಗಳೇನು, ಇನ್‌ಫ್ಲುಯೆಂಜಾಗೆ ಆ್ಯಂಟಿಬಯೊಟಿಕ್ಸ್ ಕೊಡದಂತೆ IMA ಸೂಚನೆ

 ಭಾರತದಲ್ಲಿಇದೀಗ ಕೋವಿಡ್‌ 19ನಂಥ ಮತ್ತೊಂದು ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರ ಈ ಕುರಿತು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಜನರು ಕೂಡ ಮುನ್ನೆಚ್ಚರಿಕೆವಹಿಸುವಂತೆ ಕೋರಿದೆ. ಈ ಕಾಯಿಲೆಗೆ H3N2 ಹೆಸರಿಡಲಾಗಿದೆ. ಇದೊಂದು ಇನ್‌ಫ್ಲುಯೆಂಜಾ ಕಾಯಿಲೆಯಾಗಿದ್ದು ಕೆಲವು ತಿಂಗಳಿನಿಂದ ಈ ಕಾಯಿಲೆ ಹರಡುತ್ತಿದ್ದು ಇದೀಗ ವ್ಯಾಪಾಕವಾಗಿ ಹರಡುತ್ತಿದೆ.

ಈ ಒಂದು ತಿಂಗಳಿನಲ್ಲಿ ಸಾವಿರಾರು ಸಂಖ್ಯೆಯ ಜನರಿಗೆ H3N2 ಬಾಧಿಸಿದೆ. H3N2 ಇನ್‌ಫ್ಲುಯೆಂಜಾ ಅಪಾಯಕಾರಿಯೇ, ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಇನ್‌ಫ್ಲುಯೆಂಜಾ ಅಪಾಯಕಾರಿಯೇ?

ಜ್ವರ ಎಂದು ಬರುತ್ತಿರುವ ಶೇ. 92ರಷ್ಟು ಜನರಲ್ಲಿ H3N2 ಫ್ಲೂ ಕಾಣಿಸಿಕೊಂಡಿದೆ. ಅವರಲ್ಲಿ ಶೇ. 86ರಷ್ಟು ರೋಗಿಗಳಲ್ಲಿ ವಿಪರೀತ ಕೆಮ್ಮು, ಶೇ. 27ರಷ್ಟು ರೋಗಿಗಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಅವರಲ್ಲಿ ಶೇ 16ರಷ್ಟು ಜನರಲ್ಲಿ ನ್ಯೂಮೋನಿಯಾ, ಶೇ. 6ಷ್ಟು ರೋಗಿಗಳಲ್ಲಿ ಪಿಡ್ಸ್‌ ಸಮಸ್ಯೆ ಕಂಡು ಬಂದಿದೆ. ಹೆಚ್ಚಿನವರು ಆಕ್ಸಿಜನ್ ಕೊರತೆ ಉಂಟಾಗಿ ಐಸಿಯು ದಾಖಲಾಗುತ್ತಿದ್ದಾರೆ.

ಪ್ರಾರಂಭದಲ್ಲಿಯೇ ಆ್ಯಂಟಿಬಯೊಟಿಕ್ಸ್ ಕೊಡದಂತೆ ವೈದ್ಯರಿಗೆ ಸೂಚನೆ

ವೈದ್ಯರು ಜ್ವರವೆಂದು ಬಂದ ರೋಗಿಗೆ ಆರಂಭದಲ್ಲಿಯೇ ಆ್ಯಂಟಿಬಯೋಟಿಕ್ಸ್ ನೀಡಿದಂತೆ ಇಂಡಿಯನ್‌ ಮೆಡಿಕಲ್‌ ಅಸೋಷಿಯೇಷನ್ ಸೂಚಿಸಿದೆ. ಬ್ಯಾಕ್ಟಿರಿಯಾ ಸೋಂಕು ಎಂದು ಖಾತರಿಯಾಗದೆ ಔಷಧ ನೀಡದಂತೆ ಸೂಚಿಸಲಾಗಿದೆ. ಇನ್‌ಫ್ಲುಯೆಂಜಾದಿಂದಾಗಿ ಜ್ವರ, ಕೆಮ್ಮು, ಗಂಟಲು ನೀವು, ಮೈಕೈ ನೋವು ಕಂಡು ಬರುವುದು. ಇನ್‌ಫ್ಲುಯೆಂಜಾ ಆದರೆ ಆ್ಯಂಟಿಬಯೊಟಿಕ್ಸ್ ಅವಶ್ಯಕತೆಯಿಲ್ಲ.

H3N2 ವೈರಸ್‌ ವಿಧಗಳು

ಇನ್‌ಫ್ಲುಯೆಂಜಾ ಎ ವೈರಸ್‌ನ ರೂಪಾಂತರ H3N2 (A/H3N2)ಇನ್‌ಫ್ಲುಯೆಂಜಾ ಕಾರಣದಿಂದಾಗಿ ಜ್ವರ ಉಂಟಾಗುವುದು. ಪಕ್ಷಿ, ಮನುಷ್ಯರು, ಹಂದಿ ಇವುಗಳಲ್ಲಿ ವೈರಸ್‌ ರೂಪಾಂತರವಾಗುವುದು.

H3N2 ಲಕ್ಷಣಗಳು

* ಜ್ವರ

* ಮೈ ಚಳಿಯಾಗುವುದು

* ಕೆಮ್ಮು

* ತಲೆಸುತ್ತು

* ವಾಂತಿ

* ಗಂಟಲು ಕೆರತ

* ಮೈ ಕೈ ನೋವು

* ಬೇಧಿ

* ಶೀತ

H3N2 ತಡೆಗಟ್ಟುವುದು ?

* ಆಗಾಗ ಕೈಗಳನ್ನು ತೊಳೆಯಿರಿ

* ಜನರ ಗುಂಪಿರುವ ಕಡೆ ಹೋಗಬೇಡಿ

* ಮೂಗು, ಬಾಯಿ ಆಗಾಗ ಮುಟ್ಟಬೇಡಿ

* ಸಾಕಷ್ಟು ನೀರು ಕುಡಿಯಿರಿ

* ಜ್ವರ, ಮೈಕೈ ನೋವು ಇದ್ದರೆ ಪ್ಯಾರಾಸಿಟಮೋಲ್ ತೆಗೆದುಕೊಳ್ಳಿ.

ಏನು ಮಾಡಬಾರದು?

* ಕೈ ಕುಲುಕಿ ವಿಶ್‌ ಮಾಡಬೇಡಿ, ಬದಲಿಗೆ ನಮಸ್ತೆ ಹೇಳಿ

* ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ

* ಸ್ವ ಚಿಕಿತ್ಸೆ ಮಾಡದೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಿರಿ

* ಗುಂಪು ಇರುವ ಸ್ಥಳಗಳಿಗೆ ಹೋಗುವುದು, ಬೇರೆಯವರ ಸಮೀಪ ಕೂತು ತಿನ್ನುವುದು ಮಾಡಬೇಡಿ.

ಸರ್ಕಾರ ಈ ಗೈಡ್‌ಲೈನ್‌ ನೀಡಿದೆ

* ಆಸ್ಪತ್ರೆಗಳಲ್ಲಿ ಮಾತ್ರೆಗಳ ಸ್ಟಾಕ್ ಇರಬೇಕು, oseltamivir ಇರಬೇಕು ಹಾಗೂ ಆಸ್ಪತ್ರೆ ಸಿಬ್ಬಂದಿ ಧರಿಸಲು ಪಿಪಿಇ ಕಿಟ್ ಇರಬೇಕು.

* ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.

* ಕೋವಿಡ್ 19 ನೆಗೆಟಿವ್ ಬಂದು ಜ್ವರದಿಂದ ಸಾವನ್ನಪ್ಪಿದವರ ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷಿಗೆ ವೈರಸ್ ರಿಸರ್ಚ್‌ ಡಯೋಗ್ನಾಸ್ಟಿಕ್ ಲ್ಯಾಬೋರೇಟರಿಗೆ ಕಳುಹಿಸಬೇಕು.

* ಅನವಶ್ಯಕವಾಗಿ ಆ್ಯಂಟಿಬಯೊಟಿಕ್ಸ್ ನೀಡಬೇಡಿ.


 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries