HEALTH TIPS

HAL ನ ಶೇ 3.5ರಷ್ಟು ಷೇರು ಮಾರಾಟ: ಕೇಂದ್ರದ ಬೊಕ್ಕಸಕ್ಕೆ ₹ 2,867 ಕೋಟಿ ನಿರೀಕ್ಷೆ

 

              ಬೆಂಗಳೂರು: ಬೆಂಗಳೂರು ಮೂಲದ ಬಾಹ್ಯಾಕಾಶ ಹಾಗೂ ರಕ್ಷಣಾ ಕಂಪೆನಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಲ್‌) ನ ಶೇ 3.5 ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು 'ರಾಯಿಟರ್ಸ್‌' ಸುದ್ದಿ ಸಂಸ್ಥೆ ವರದಿ ಮಾಡಿದೆ.

                    ಇದೇ ವಾರದಲ್ಲಿ ಎಎಚ್‌ಎಲ್‌ನ ಷೇರು ವಿಕ್ರಯ ಮಾಡಲಾಗುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 2,867 ಕೋಟಿ ಸೇರಲಿದೆ.

                   ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಲಾದ ದಾಖಲೆಯೊಂದರಿಂದ ಈ ವಿಷಯ ಗೊತ್ತಾಗಿದೆ.

                      ಕೇಂದ್ರ ಸರ್ಕಾರ ಆರಂಭಿಸಿರುವ ಸರ್ಕಾರಿ ಒಡೆತನದ ಕಂಪನಿಗಳ ಷೇರು ಮಾರಾಟ ಯೋಜನೆಯ ಭಾಗವಾಗಿ ಎಎಚ್‌ಎಲ್‌ನ ಷೇರುಗಳನ್ನು ವಿಕ್ರಯ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.

                    ಈಗಾಗಲೇ ಸರ್ಕಾರಿ ಸ್ವಾಮ್ಯದ ಕಂಪನಿಗಳ ಷೇರು ವಿಕ್ರಯದಿಂದ ಕೇಂದ್ರ ಸರ್ಕಾರಕ್ಕೆ ₹ 31,110 ಕೋಟಿ ಹರಿದು ಬಂದಿದ್ದು, ಮಾರ್ಚ್‌ 31ರ ವೇಳೆಗೆ ₹ 50,000 ಕೋಟಿ ಮುಟ್ಟುವ ಗುರಿ ಹಾಕಿಕೊಂಡಿದೆ.

                  ಸದ್ಯ ಸರ್ಕಾರವು ಎಚ್‌ಎಎಲ್‌ನಲ್ಲಿ ಶೇ 75.15 ರಷ್ಟು ಪಾಲು ಹೊಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries