HEALTH TIPS

ಚೀನಾ ಗಡಿ ಪ್ರದೇಶಕ್ಕೆ 10ಕ್ಕೆ ಅಮಿತ್ ಶಾ ಭೇಟಿ

 

                ನವದೆಹಲಿ: ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಇದೇ 10 ಮತ್ತು 11ರಂದು ಆರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಚೀನಾ ಗಡಿ ಪ್ರದೇಶದ ಕಿಬಿಥೂ ಗ್ರಾಮದಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿ ಯೋಜನೆಗೆ (ವೈಬ್ರೆಂಟ್‌ ವಿಲೇಜಸ್‌ ಪ್ರೋಗ್ರಾಂ) ಚಾಲನೆ ನೀಡಲಿದ್ದಾರೆ.

                  ಗಡಿ ರಾಜ್ಯಗಳಲ್ಲಿ ರಸ್ತೆ ಸಂಪರ್ಕ ಸಾಧಿಸಲು ಕೇಂದ್ರ ಸರ್ಕಾರ ₹ 4,800 ಕೋಟಿ ತೆಗೆದಿರಿಸಿದ್ದು, ಅದರ ಭಾಗವಾಗಿ ಗಡಿ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗೆ ಸಚಿವರು ಚಾಲನೆ ನೀಡಲಿದ್ದಾರೆ. ಈ ಯೋಜನೆಯಂತೆ ಉತ್ತರ ಭಾರತದ 19 ಜಿಲ್ಲೆಗಳ 2,967 ಹಳ್ಳಿಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ.

             'ಗೋಲ್ಡನ್ ಜ್ಯುಬಿಲಿ ಬಾರ್ಡರ್‌ ಇಲ್ಯುಮಿನೇಷನ್‌ ಪ್ರೋಗ್ರಾಂ' ಯೋಜನೆಯಡಿಯಲ್ಲಿ ನಿರ್ಮಿಸಲಾದ ಒಂಬತ್ತು ಕಿರು ಜಲವಿದ್ಯುತ್ ಯೋಜನೆಗಳನ್ನೂ ಅಮಿತ್ ಶಾ ಉದ್ಘಾಟಿಸಲಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries