HEALTH TIPS

ಹಲಾಲ್‌ ಪ್ರಮಾಣೀಕೃತ ಮಾಂಸಗಳಿಗೆ ನೂತನ ನಿಯಮ ವಿಧಿಸಿದ ಕೇಂದ್ರ ಸರಕಾರ

                   ವದೆಹಲಿ :ಮಾಂಸ ಮತ್ತು ಅದರ ಉತ್ಪನ್ನಗಳ ರಫ್ತಿಗೆ 'ಹಲಾಲ್ ಪ್ರಮಾಣೀಕೃತ' ನೀಡುವ ಕುರಿತು ಕೇಂದ್ರ ಸರ್ಕಾರ ಗುರುವಾರ ನೂತನ ಕಾರ್ಯಸೂಚಿ ಹೊರಡಿಸಿದೆ. ಇದೀಗ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಮಂಡಳಿಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣಪತ್ರವನ್ನು ಹೊಂದಿರುವ ಕಡೆ ಮಾಂಸವನ್ನು ಉತ್ಪಾದಿಸಿ, ಸಂಸ್ಕರಿಸಿ ಪ್ಯಾಕ್ ಮಾಡಿದರೆ ಮಾತ್ರ ಅಂತಹ ವಸ್ತುಗಳನ್ನು 'ಹಲಾಲ್ ಪ್ರಮಾಣೀಕೃತ' ಎಂದು ರಫ್ತು ಮಾಡಲು ಅನುಮತಿಸಲಾಗುತ್ತದೆ ಎಂದು ತಿಳಿಸಿದೆ.

                    ಹಲಾಲ್ ಅಲ್ಲದ ಮಾಂಸ ಮತ್ತು ಮಾಂಸ ಉತ್ಪನ್ನಗಳ ರಫ್ತು ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಾಣಿಜ್ಯ ಸಚಿವಾಲಯ ಗುರುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಲಾಲ್‌ ಮಾಂಸಗಳಿಗೆ ಬೇಡಿಕೆಯಿರುವ ದೇಶಗಳ ಅವಶ್ಯಕತೆ ಮತ್ತು ನಿಯಮಗಳಿಗೆ ತಕ್ಕಂತೆ ಉತ್ಪಾದಕ/ಪೂರೈಕೆದಾರ/ರಫ್ತುದಾರರು ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ ಎಂದು ಅದರಲ್ಲಿ ತಿಳಿಸಿದೆ.

                  ಈ ವರ್ಷದ ಆರಂಭದಲ್ಲಿ, ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಮಾಂಸ ಮತ್ತು ಮಾಂಸ ಉತ್ಪನ್ನಗಳ ರಫ್ತಿಗೆ ಹಲಾಲ್ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಲಾಲ್ ಪ್ರಮಾಣೀಕರಣದ ಕರಡು ಮಾರ್ಗಸೂಚಿಗಳನ್ನು ಹಂಚಿಕೊಂಡಿತ್ತು. "ಮಾಂಸ ಮತ್ತು ಮಾಂಸ ಉತ್ಪನ್ನಗಳ ಹಲಾಲ್ ಪ್ರಮಾಣೀಕರಣ ಪ್ರಕ್ರಿಯೆಯ ನೀತಿ ಷರತ್ತುಗಳನ್ನು ಸೂಚಿಸಲಾಗುವುದು" ಎಂದು ಡಿಜಿಎಫ್‌ಟಿ ಅಧಿಸೂಚನೆಯಲ್ಲಿ ತಿಳಿಸಿತ್ತು.

              ಸದ್ಯ ಅಸ್ತಿತ್ವದಲ್ಲಿರುವ ಎಲ್ಲಾ ಹಲಾಲ್ ಪ್ರಮಾಣೀಕರಣ ಸಂಸ್ಥೆಗಳಿಗೆ ಐ-ಸಿಎಎಸ್ (ಭಾರತೀಯ ಅನುಸರಣೆ ಮೌಲ್ಯಮಾಪನ ಯೋಜನೆ) ಹಲಾಲ್‌ಗಾಗಿ NABCB (ಪ್ರಮಾಣೀಕರಣ ಸಂಸ್ಥೆಗಳಿಗೆ ರಾಷ್ಟ್ರೀಯ ಮಾನ್ಯತೆ ಮಂಡಳಿ) ನಿಂದ ಮಾನ್ಯತೆ ಪಡೆಯಲು ಆರು ತಿಂಗಳ ಸಮಯವನ್ನು ನೀಡಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries