HEALTH TIPS

ರೈಲಿನ ವೇಗ 200 ಕಿ.ಮೀ.ಗೆ ಹೆಚ್ಚಳ!

 

                   ನವದೆಹಲಿ: ಹೈಸ್ಪೀಡ್ ರೈಲುಗಳ ಸಂಚಾರಕ್ಕಾಗಿ ಪ್ರತ್ಯೇಕ ಮಾರ್ಗಗಳನ್ನು ನಿರ್ವಿುಸುವ ಉದ್ದೇಶ ಹೊಂದಿರುವ ಭಾರತೀಯ ರೈಲ್ವೆ, ಇದರ ಭಾಗವಾಗಿ ತಾಸಿಗೆ 220 ಕಿ.ಮೀ. ವೇಗದಲ್ಲಿ ಸಂಚರಿಸಲು ಸಾಧ್ಯವಾಗುವಂತಹ ಪರೀಕ್ಷಾರ್ಥ ಹಳಿಗಳನ್ನು ವಾಯವ್ಯ ರೈಲ್ವೆ ವಲಯದ ಜೋಧಪುರ್ ವಿಭಾಗದಲ್ಲಿ ನಿರ್ವಿುಸುತ್ತಿದೆ.

                     ರಾಜಸ್ಥಾನದ ಗುಧಾ-ಥಥಾನಾ ಮಿಠರಿ ನಿಲ್ದಾಣಗಳ ಮಧ್ಯೆ 59 ಕಿ.ಮೀ. ಉದ್ದ ಈ ಹಳಿಗಳು ಅಂತಾರಾಷ್ಟ್ರೀಯ ಗುಣಮಟ್ಟದ ಸಮಗ್ರ ಪರೀಕ್ಷಾ ಮಾರ್ಗವಾಗಿದ್ದು, ಇಂಥದನ್ನು ನಿರ್ವಿುಸುತ್ತಿರುವ ಮೊದಲ ದೇಶ ಭಾರತ ಆಗಿದೆ.

                  ಈ ಮಾರ್ಗದಲ್ಲಿ ಸೆಮಿ ಹೈಸ್ಪೀಡ್ ರೈಲಾಗಿರುವ ವಂದೇ ಭಾರತ್ ಎಕ್ಸ್​ಪ್ರೆಸ್​ಗಳ ವೇಗವನ್ನು ಪರೀಕ್ಷಿಸಲಾಗುವುದು. ಈ ಮಾರ್ಗದಲ್ಲಿ 23 ಕಿ.ಮೀ. ಉದ್ದ ಮುಖ್ಯ ಮಾರ್ಗವಿದ್ದು, 13 ಕಿ.ಮೀ. ಉದ್ದದ ಉಪಮಾರ್ಗಗಳು (ಲೂಪ್) ಇವೆ. ನವಾ ಎಂಬಲ್ಲಿ ಮೂರು ಕಿ.ಮೀ. ಉದ್ದದ ವೇಗವರ್ಧಿತ ಲೂಪ್ ಇದ್ದರೆ, ಮಿಠರಿಯಲ್ಲಿ 20 ಕಿ.ಮೀ. ಉದ್ದದ ತಿರುವು (ಕರ್ವ್)ಗಳ ಪರೀಕ್ಷೆಯ ಮಾರ್ಗ ಇದೆ. ಈ ಮಾರ್ಗದ ಮೊದಲ ಹಂತದ ಕಾಮಗಾರಿ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳಲಿದ್ದು, ಎರಡನೇ ಹಂತ ಕಾರ್ಯಗಳು 2024ರ ಡಿಸೆಂಬರ್​ಗೆ ಮುಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಾಯವ್ಯ ರೈಲ್ವೆ ವಲಯದ ಸಿಪಿಆರ್​ಒ ಕ್ಯಾಪ್ಟನ್ ಶಶಿಕಿರಣ್ ತಿಳಿಸಿದ್ದಾರೆ.

                   ವೇಗವಾಗಿ ಸಂಚರಿಸುವಾಗ ಹಳಿ ಬದಲಾವಣೆ ವೇಳೆ ರೈಲಿನ ಗಾಲಿಗಳ ಕ್ಷಮತೆ, ಡಿಕ್ಕಿಯಾದರೆ ಅದರ ಪರಿಣಾಮ, ವೇಗದಲ್ಲಿ ರೈಲಿನ ಸ್ಥಿರತೆ, ತಿರುವುಗಳಲ್ಲಿ ಬೋಗಿಗಳ ಪ್ರತಿರೋಧಕ ಕ್ಷಮತೆ ಇನ್ನಿತರ ಅಂಶಗಳ ಸಮಗ್ರ ಅಧ್ಯಯನ ಈ ಮಾರ್ಗದಲ್ಲಿ ನಡೆಯಲಿದೆ. ಸದ್ಯ ಭಾರತದಲ್ಲಿ ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗ ತಾಸಿಗೆ 160 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಬಹುದಾದ ಪಥವೆಂದು ಗುರುತಿಸಲಾಗಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries