HEALTH TIPS

ಭಾರತ ವಿರೋಧಿ ಚಟುವಟಿಕೆ ವಿರುದ್ಧ ಕ್ರಮ: ರಿಷಿ ಸುನಕ್​ ಜತೆ ಪ್ರಧಾನಿ ಮೋದಿ ಚರ್ಚೆ

 

                ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಅವರು ಉಭಯ ದೇಶಗಳ ವಿವಿಧ ದ್ವಿಪಕ್ಷೀಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

              ಲಂಡನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿನ ಭಾರತದ ಬಾವುಟವನ್ನು ಖಲಿಸ್ತಾನ ಬೆಂಬಲಿಗರು ಕಿತ್ತೆಸೆದ ವಾರಗಳ ಬಳಿಕ ಉಭಯ ನಾಯಕರು ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ.

                                     ಕ್ರಮಕ್ಕೆ ಒತ್ತಾಯ
                      ಪ್ರಧಾನಿ ಮೋದಿ ಅವರು ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕ ಸಂಸ್ಥೆಗಳ ಭದ್ರತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಯುಕೆ ಸರ್ಕಾರದಿಂದ ಭಾರತ ವಿರೋಧಿಗಳ ವಿರುದ್ಧ ಬಲವಾದ ಕ್ರಮಕ್ಕೆ ಒತ್ತಾಯಿಸಿದರು. ಭಾರತೀಯ ಹೈಕಮಿಷನ್ ಮೇಲಿನ ದಾಳಿಯನ್ನು ಯುಕೆ ಸ್ವೀಕರಿಸುವುದಿಲ್ಲ. ಅದನ್ನು ಖಂಡಿಸುತ್ತೇವೆ ಮತ್ತು ಭದ್ರತೆಯ ಭರವಸೆ ಎಂದು ಪರಿಗಣಿಸುತ್ತೇವೆ ಎಂದು ಸುನಕ್ ತಿಳಿಸಿದ್ದಾರೆ.

                  ಇಷ್ಟೇ ಅಲ್ಲದೆ, ಬ್ರಿಟನ್‌ನಲ್ಲಿ ಆಶ್ರಯ ಪಡೆದಿರುವ ಆರ್ಥಿಕ ಅಪರಾಧಿಗಳು ಅಥವಾ ವಂಚಕ ಉದ್ಯಮಿಗಳ ವಾಪಸಾತಿ ಬಗ್ಗೆಯೂ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.

                                        ಉಭಯ ನಾಯಕರ ಒಪ್ಪಿಗೆ
                 ಹಲವಾರು ದ್ವಿಪಕ್ಷೀಯ ವಿಷಯಗಳಾದ ಅದರಲ್ಲೂ ವಿಶೇಷವಾಗಿ ವ್ಯಾಪಾರ ಮತ್ತು ಆರ್ಥಿಕ ವಲಯಗಳಲ್ಲಿನ ಪ್ರಗತಿಯನ್ನು ಉಭಯ ದೇಶದ ಪ್ರಧಾನಿಗಳು ಚರ್ಚೆ ನಡೆಸಿದ್ದಾರೆ. ಭಾರತ-ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಶೀಘ್ರ ತೀರ್ಮಾನದ ಅಗತ್ಯವನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಎಂದು ಭಾತೀಯರ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                                       ಯುಕೆ ಸಂಪೂರ್ಣ ಬೆಂಬಲ
                     ಪ್ರಧಾನಿ ಮೋದಿ ಅವರು ಸುನಕ್ ಅವರಿಗೆ ಬೈಸಾಖಿಯ ದಿನದ ಶುಭಾಶಯಗಳನ್ನು ತಿಳಿಸಿದರು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ಸುನಕ್ ಅವರನ್ನು ಆಹ್ವಾನಿಸಿದರು. ಭಾರತದ ನಡೆಯಲಿರುವ ಜಿ-20 ಪ್ರೆಸಿಡೆನ್ಸಿಗೆ ಯುಕೆ ಸಂಪೂರ್ಣ ಬೆಂಬಲವನ್ನು ಸುನಕ್​ ಅವರು ಪುನರುಚ್ಚರಿಸಿದರು.

                  ಕಳೆದ ನವೆಂಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ಸಭೆಯಲ್ಲಿ ಉಭಯ ನಾಯಕರು ಕೊನೆಯ ಬಾರಿ ಭೇಟಿಯಾಗಿದ್ದರು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries