HEALTH TIPS

ಸೂರ್ಯಗ್ರಹಣ 2023 : ಸೂರ್ಯಗ್ರಹಣ ದಿನಾಂಕ, ಸಮಯ ಮತ್ತು ಎಲೆಲ್ಲಿ ಗೋಚರವಾಗುತ್ತದೆ?

 

ಸೂರ್ಯ ಹಾಗೂ ಭೂಮಿಯ ಮಧ್ಯೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಸೂರ್ಯ ಹಾಗೂ ಭೂಮಿಯ ಮಧ್ಯೆ ಬರೋದ್ರಿಂದ ಸೂರ್ಯನಿಂದ ಭೂಮಿಗೆ ಬರುವ ಬೆಳಕನ್ನು ತಡೆಹಿಡಿಯುತ್ತದೆ. ಹೀಗಾಗಿ ಭೂಮಿಯ ತುಂಬೆಲ್ಲಾ ಕತ್ತಲು ಆವರಿಸುತ್ತದೆ. ಇಂತಹದೊಂದು ವಿದ್ಯಾಮಾನ ಯಾವಾಗಲೂ ನಮಗೆ ಕಾಣ ಸಿಗೋದಿಲ್ಲ. ಯಾವಾಗಲಾದರೂ ಒಮ್ಮೆ ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಾಗ ಮಾತ್ರ ಸಂಭವಿಸುತ್ತದೆ. ಹಾಗಾದ್ರೆ ಈ ಬಾರಿ ಸೂರ್ಯಗ್ರಹಣ ಯಾವಾಗ ಸಂಭವಿಸಲಿದೆ? ದಿನಾಂಕ, ಸಮಯ ಹಾಗೂ ಇತರ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.

ಈ ವರ್ಷದಲ್ಲಿ ಸಂಭವಿಸಲಿರುವ ಗ್ರಹಣಗಳು : ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್‌ 20 ರಂದು ಸಂಭವಿಸಲಿದೆ. ಇದಾದ ಬಳಿಕ ಮೇ 5 ಮತ್ತು ಮೇ 6 ರ ಮಧ್ಯರಾತ್ರಿಯಲ್ಲಿ ಭಾರತದಲ್ಲಿ 'ಪೆನಂಬ್ರಲ್' ಚಂದ್ರಗ್ರಹಣ ಸಂಭವಿಸಲಿದೆ. ಇನ್ನೂ ಅಕ್ಟೋಬರ್ 14 ಮತ್ತು ಅಕ್ಟೋಬರ್ 15 ರಂದು ಮತ್ತೆ ಉಂಗುರಾಕರದ ಸೂರ್ಯಗ್ರಹಣ ಸಂಭವಿಸಲಿದೆ. ಅಕ್ಟೋಬರ್ 28 ಮತ್ತು ಅಕ್ಟೋಬರ್ 29 ರ ನಡುವೆ ಭಾರತದಲ್ಲಿ ಭಾಗರ್ಶ ಚಂದ್ರಗ್ರಹಣ ಗೋಚರಿಸಲಿದೆ. ಇನ್ನೂ ಈ ಗ್ರಹಣದ ಸಮಯದಲ್ಲಿ ಚಂದ್ರನ ಶೇಕಡಾ 12.6 ರಷ್ಟು ಭಾಗವು ಭೂಮಿಯ ನೆರಳಿನಿಂದ ಆವರಿಸಿರುತ್ತದೆ.
ಭಾರತದಲ್ಲಿ ಸೂರ್ಯಗ್ರಹಣ ಯಾವ ಸಮಯದಲ್ಲಿ ಕಾಣಿಸಲಿದೆ? ಏಪ್ರಿಲ್‌ 20 ರಂದು ಈ ವರ್ಷದ ಮೊದಲ ಸೂರ್ಯಗ್ರಹಣ ಕಾಣಿಸಿಕೊಳ್ಳಲಿದೆ. ಭಾರತದ ಪ್ರಮಾಣಿತ ಸಮಯದ ಪ್ರಕಾರ ಸೂರ್ಯಗ್ರಹಣವು ಬೆಳಗ್ಗೆ 7:04 ಕ್ಕೆ ಆರಂಭವಾಗಿ ಮಧ್ಯಾಹ್ನ 12:29ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ಭಾರತದಲ್ಲಿ ಈ ವಿದ್ಯಾಮಾನ ಗೋಚರವಾಗೋದಿಲ್ಲ. ಆಸ್ಟ್ರೇಲಿಯಾ, ಪೂರ್ವ ಮತ್ತು ದಕ್ಷಿಣ ಏಷಿಯಾ, ಫೆಸಿಫಿಕ್‌ ಸಮುದ್ರ, ಅಂಟಾರ್ಟಿಕಾ ಹಾಗೂ ಹಿಂದೂ ಮಾಹಾಸಾಗರದಲ್ಲಿ ಮಾತ್ರ ಕಾಣಿಸಿಕೊಳ್ಳಲಿದೆ.
ಭಾರತದಲ್ಲಿ ಸೂರ್ಯಗ್ರಹಣ ಗೋಚರವಾಗದಿರಲು ಕಾರಣವೇನು? ಏಪ್ರಿಲ್‌ 20 ರಂದು ಕಾಣಿಸಿಕೊಳ್ಳುವ ಉಂಗುರಾಕಾರದ ಸೂರ್ಯಗ್ರಹಣವು ಕೆಲವೇ ಕೆಲವು ಸೆಕೆಂಡ್‌ಗಳ ಕಾಲ ಹಿಂದೂ ಮಹಾಸಾಗರ ಮತ್ತು ಫೆಸಿಫಿಕ್‌ ಸಾಗರದಲ್ಲಿ ಕಾಣಿಸಿಕೊಳ್ಳಲಿದೆ. ಈ ವಿದ್ಯಾಮಾನ ಭೂಮಿಯಲ್ಲಿ ಕಾಣಿಸಿಕೊಳ್ಳೋದಿಲ್ಲ. ಇನ್ನೂ ಸೂರ್ಯಗ್ರಹಣ ಸಂಪೂರ್ಣ ವಿದ್ಯಾಮಾನವು ಪ್ರಪಂಚದ ಮೂರು ಭಾಗಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದು ಅವುಗಳೆಂದರೆ ಎಕ್ಸ್ಮೌತ್, ಪಶ್ಚಿಮ ಆಸ್ಟ್ರೇಲಿಯಾ, ಟಿಮೋರ್ ಲೆಸ್ಟೆ ಮತ್ತು ಪಶ್ವಿಮ ಪಪುವಾ.

ಹೈಬ್ರಿಡ್‌ ಸೈರ್ಯಗ್ರಹಣ ಎಂದರೇನು? ಹೈಬ್ರಿಡ್‌ ಸೂರ್ಯಗ್ರಹಣ ಎಂದರೆ ಇದು ವಾರ್ಷಿಕ ಗ್ರಹಣ ಮತ್ತು ಸಂಪೂರ್ಣ ಸೂರ್ಯಗ್ರಹಣದ ವಿಶಿಷ್ಟ ಸಂಯೋಜನೆಯಾಗಿದೆ. ಈ ವೇಳೆ ಸೂರ್ಯನು ಕೆಲವು ಸೆಕೆಂಡುಗಳ ಕಾಲ 'ಬೆಂಕಿಯ ಉಂಗುರ' ಎಂದು ಕರೆಯಲ್ಪಡುವ ಉಂಗುರದ ಆಕಾರಕ್ಕೆ ಬದಲಾಗುತ್ತಾನೆ. ಈ ವೇಳೆ ಆಕಾಶದಲ್ಲಿ ಸೂರ್ಯನ ತುದಿಯ ಭಾಗಗಳು ಬೆಂಕಿಯಂತೆ ಉರಿಯುತ್ತಿರುತ್ತದೆ. ಆದರೆ ಭಾರತದಲ್ಲಿ ಈ ವಿದ್ಯಾಮಾನ ಕಾಣ ಸಿಗೋದಿಲ್ಲ.

ಸೂರ್ಯಗ್ರಹಣವನ್ನು ವೀಕ್ಷಿಸುವ ವಿಧಾನ ಹೇಗೆ? ಭಾರತದಲ್ಲಿ ಈ ಬಾರಿ ಸೂರ್ಯಗ್ರಹಣ ಗೋಚರಿಸುತ್ತಿಲ್ಲ. ಆದರೂ ಕೂಡ ಸೂರ್ಯಗ್ರಹಣವನ್ನು ನೋಡಬೇಕು ಎನ್ನುವವರು ಈ ರೀತಿ ನೋಡಬಹುದು. ಟೆಲಿಸ್ಕೋಪ್‌ ಸಹಾಯದಿಂದ ಸೂರ್ಯಗ್ರಹಣ ವೀಕ್ಷಣೆ ಮಾಡಬಹುದು, ಕಪ್ಪು ಪಾಲಿಮರ್, ಅಲ್ಯುಮಿನೈಸ್ಡ್ ಮೈಲಾರ್, ಶೇಡ್ ಸಂಖ್ಯೆ 14 ರ ವೆಲ್ಡಿಂಗ್ ಗ್ಲಾಸ್ ಅಥವಾ ಎಕ್ಲಿಪ್ಸ್ ಗ್ಲಾಸ್‌ಗಳಂತಹ ಕಣ್ಣಿನ ಫಿಲ್ಟರ್‌ಗಳನ್ನು ಕೂಡ ಬಳಸಬಹುದು. ಇನ್ನೂ ಬರೀಗಣ್ಣಿನಿಂದ ಅಥವಾ ನೀವು ಬಳಸುವ ನಾರ್ಮಲ್‌ ಗ್ಲಾಸ್‌ನಿಂದ ಸೂರ್ಯಗ್ರಹಣವನ್ನು ನೋಡೋದಕ್ಕೆ ಹೋಗಬೇಡಿ.
Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries