HEALTH TIPS

ಹೊಟ್ಟೆ ಹಾಳಾದಾಗ ಹೀಗೆ ಮಾಡಿ ಬೇಗನೆ ಚೇತರಿಸಿಕೊಳ್ಳುವಿರಿ

 

ಬೇಸಿಗೆಯಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಅದರಲ್ಲೂ ಹೊರಗಡೆಯ ಊಟ ತಿನ್ನುವ ಅಭ್ಯಾಸ ಇರುವವರಿಗೆ ವಾಂತಿ- ಬೇಧಿ, ಹೊಟ್ಟೆ ನೋವಿನ ಸಮಸ್ಯೆ ಹೆಚ್ಚು. ಬೇಸಿಗೆಯಲ್ಲಿ ನಾವು ಆಹಾರಕ್ರಮದ ಕಡೆಗೆ ತುಂಬಾನೇ ಗಮನ ಕೊಡಬೇಕಾಗುತ್ತದೆ.

ಇಲ್ಲದಿದ್ದರೆ ಆರೋಗ್ಯ ಕೈ ಕೊಡುವುದು ಗ್ಯಾರಂಟಿ. ಅದರಲ್ಲೂ ಬೆಂಗಳೂರಿನಲ್ಲಿ ಸ್ಟೊಮಕ್ ಫ್ಲೂ ಸಮಸ್ಯೆ ಹೆಚ್ಚಾಗುತ್ತಿದೆ. ಹೊಟ್ಟೆ ಹಾಳಾದರೆ ಅಥವಾ ಫುಡ್‌ ಪಾಯಿಸನ್ ಆದರೆ ಮನೆಮದ್ದೇನು ಎಂದು ನೋಡೋಣ ಬನ್ನಿ:

ಸ್ಟೊಮಕ್ ಫ್ಲೂ ಲಕ್ಷಣಗಳೇನು? * ನೀರು ನೀರಾಗಿ ಮಲವಿಸರ್ಜನೆ, ಅದರಲ್ಲೂ ಒಂದಕ್ಕಿಂತ ಅಧಿಕ ಬಾರಿ ಮಲವಿಸರ್ಜನೆಗೆ ಹೋಗುವುದು. * ವಾಂತಿ * ಸುಸ್ತು * ಹೊಟ್ಟೆಯಲ್ಲಿ ಸೆಳೆತ, ನೀವು * ಕೆಲವೊಬ್ಬರಿಗೆ ಜ್ವರ ಚಿಕಿತ್ಸೆ ಈ ರೀತಿ ಹೊಟ್ಟೆ ಕೆಟ್ಟಾಗ ಯಾವುದೇ ಆ್ಯಂಟಿಬಯೋಟಿಕ್‌ ವರ್ಕ್ ಆಗಲ್ಲ. ಬದಲಿಗ ನೀವು ದೇಹದಲ್ಲಿ ನೀರಿನಂಶ ಕಾಪಾಡುವುದರ ಕಡೆಗೆ ಗಮನಹರಿಸಬೇಕು. ಸಾಕಷ್ಟು ನೀರು ಕುಡಿಯಬೇಕು. ಅಲ್ಲದೆ ಆಹಾರಕ್ರಮದ ಕಡೆಗೆ ತುಂಬಾನೇ ಗಮನಕೊಡಬೇಕು, ಆವಾಗ ಬೇಗನೆ ಚೇತರಿಸಿಕೊಳ್ಳಬಹುದು. ಸ್ಟೊಮಕ್ ಫ್ಲೂಗೆ ಮನೆಮದ್ದೇನು? * ಹೊಟ್ಟೆ ಸರಿಯಾಗಿಲು ಸಮಯ ನೀಡಿ: ಹೊಟ್ಟೆ ಹಾಳಾಗಿದ್ದರೆ ಕನಿಷ್ಠ ಒಂದು ವಾರ ನೀವು ಆಹಾರಕ್ರಮದ ಕಡೆಗೆ ತುಂಬಾನೇ ಗಮನ ನೀಡಬೇಕು. ಸಾಕಷ್ಟು ನೀರು ಕುಡಿಯಿರಿ. ಜ್ಯೂಸ್‌ ಕುಡಿಯಿರಿ. ಮಸಾಲೆ ಪದಾರ್ಥಗಳು, ನಾನ್‌ವೆಜ್‌ ಮುಟ್ಟಬೇಡಿ. ಆದರೆ ತೆಳುಮಾಂಸದ ಸೂಪ್‌ ಕುಡಿಯಬಹುದು. * ಚಿಪ್ಸ್, ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ: ಹೊಟ್ಟೆ ಹಾಳಾದಾಗ ಚಿಪ್ಸ್ , ಪಿಜ್ಜಾ, ಬರ್ಗರ್, ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ. ಅಲ್ಲದೆ ಸಾಕಷ್ಟು ನೀರು ಕುಡಿಯಿರಿ, ಅದರಲ್ಲೂ ಕುದಿಸಿ ಆರಿಸಿದ ನೀರು ಕುಡಿಯಿರಿ.

* ಬ್ಲ್ಯಾಕ್ ಟೀ ಒಳ್ಳೆಯಯ: ಹೊಟ್ಟೆ ಹಾಳಾದಾಗ ಹಾಲು ಹಾಕಿದ ಟೀ ಕುಡಿಯಬೇಡಿ. ಬದಲಿಗೆ ಬ್ಲ್ಯಾಕ್ ಟೀ ಕುಡಿಯಿರಿ. ಪುದೀನಾ ಟೀ, ಶುಂಠಿ ಟೀ ಒಳ್ಳೆಯದು. ಸೂಪ್, ಗಂಜಿ, ಅಜ್ವೈನ್, ಜೀರಿಗೆ ನೀರು, ಸೋಡಾ ಶರಬತ್ತು ಇವೆಲ್ಲಾ ಒಳ್ಳೆಯದು. * ಔಷಧಿ ಜೊತೆಗೆ ವಿಶ್ರಾಂತಿ ಮುಖ್ಯ: ವೈದ್ಯರು ನೀಡಿರುವ ಔ‍ಷಧಿ ಜೊತೆಗೆ ಎಲೆಕ್ಟ್ರೋಲೈಟ್ಸ್ ತೆಗೆದುಕೊಳ್ಳಿ ಅಲ್ಲದೆ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಇದರಿಂದ ನೀವು ಬೇಗನೆ ಚೇತರಿಸಿಕೊಳ್ಳಬಹುದು. ಹೆಚ್ಚು ಆಯಾಸ ಮಾಡಿಕೊಂಡರೆ ಗುಣಮುಖರಾಗಲು ಹೆಚ್ಚು ಸಮಯ ಹಿಡಿಯುತ್ತದೆ. ಆದರೆ ವಿಶ್ರಾಂತಿ ತುಂಬಾನೇ ಮುಖ್ಯ. ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು? * ವಾಂತಿ, ಬೇಧಿ ತುಂಬಾ ಸಲ ಆದರೆ * ಎರಡು ದಿನವಾದರೂ ವಾಂತಿ-ಬೇಧಿ ಸಮಸ್ಯೆ ಕಡಿಮೆಯಾಗದಿದ್ದರೆ * ವಾಂತಿಯಲ್ಲಿ ರಕ್ತ ಬಂದರೆ * ದೇಹದಲ್ಲಿ ನೀರಿನಂಶ ತುಂಬಾ ಕಡಿಮೆಯಾದಾಗ * ಮಲವಿಸರ್ಜನೆಯಲ್ಲಿ ರಕ್ತ ಕಂಡು ಬಮದರೆ 104 ಡಿಗ್ರಿF ಜ್ವರವಿದ್ದರೆ

ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ * ಆಗಾಗ ವಾಂತಿ ಬೇಧಿ * ಮಗು ಮೂತ್ರ ವಿಸರ್ಜನೆ ಆಡಿ 6 ಗಂಟೆ ಕಳೆದಿದ್ದರೆ * ಮಲ ವಿಸರ್ಜನೆಯಲ್ಲಿ ರಕ್ತ ಕಂಡು ಬಂದರೆ * ನೆತ್ತಿ ಮುಟ್ಟಿದಾಗ ಮೃದುವಾದರೆ * ಮಗುವಿನ ಬಾಯಿ ಒಣಗುವುದು, ಅಳುವಾಗ ಕಣ್ಣಲ್ಲಿ ನೀರು ಬರದಿರುವುದು * ಮಗುವಿನಲ್ಲಿ ನಿತ್ರಾಣ
Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries