ಮುಳ್ಳೇರಿಯ/ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಫ್ತಿಯ ಅಡೂರು ದೇವರಡ್ಕದಲ್ಲಿ ಸ್ನಾನಕ್ಕಾಗಿ ಹೊಳೆಗೆ ತೆರಳಿದ್ದ ಇಬ್ಬರು ಮಕ್ಕಳು ನೀರಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾರೆ.
ಅಡೂರು ದೇವರಡ್ಕ ನಿವಾಸಿ ಮಹಮ್ಮದ್ ಹಾಶಿಂ ಅವರ ಪುತ್ರ ಮಹಮ್ಮದ್ ಆಶಿಕ್(4)ಹಾಗೂ ಯೂಸುಫ್ ಯಾನೆ ಹಸೈನಾರ್ ಎಂಬವರ ಪುತ್ರ ಮಹಮ್ಮದ್ ಫಾಸಿಲ್(3)ಮೃತಪಟ್ಟವರು.
ಇಂದು ಮಧ್ಯಾಹ್ನ ಘಟನೆ ನಡೆದಿದೆ. ಸ್ನಾನಕ್ಕೆ ತೆರಳಿದ್ದ ಮಕ್ಕಳು, ನೀರಿನಲ್ಲಿ ಮುಳುಗೇಳುತ್ತಿರುವುದನ್ನು ಹೊಳೆಯಲ್ಲಿದ್ದ ಇತರ ಮಕ್ಕಳು ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ನೀರಿನಲ್ಲಿ ಬಹಳ ಹೊತ್ತು ನಡೆಸಿದ ಹುಡುಕಾಟದ ಮಧ್ಯೆ ಇಬ್ಬರೂ ಮಕ್ಕಳನ್ನು ಪತ್ತೆಹಚ್ಚಿ ಮುಳ್ಳೇರಿಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ನ್ರತದೇಹ ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಅಡೂರು ದೇವರಡ್ಕದ ಹೊಳೆಯ ನೀರಲ್ಲಿ ಮುಳುಗಿ ಮಕ್ಕಳಿಬ್ಬರು ದಾರುಣ ಅಂತ್ಯ
0
ಏಪ್ರಿಲ್ 11, 2023
Tags





