ಬದಿಯಡ್ಕ: ಯುಡಿಎಫ್ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಅಡಕೆ ಕೃಷಿಕರ ಸಂಗಮ ಮೇ 4ರಂದು ಬದಿಯಡ್ಕ ಗುರು ಸದನದಲ್ಲಿ ಜರುಗಲಿದೆ. ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ.ಸತೀಶನ್ ಉದ್ಘಾಡಿಸುವರು. ಯುಡಿಎಫ್ ರಾಜ್ಯ ನೇತಾರರು ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಿಂದಲೂ ಅಡಕೆ ಕೃಷಿಕರನ್ನು ಭಾಗವಹಿಸುವಂತೆ ಮಾಡಲು ಬದಿಯಡ್ಕದಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಕೆ.ನೀಲಕಂಠನ್ ಅಧ್ಯಕ್ಷತೆ ವಹಿಸಿದ್ದರು. ಎ.ಗೋವಿಂದನ್ ನಾಯರ್, ಕಲ್ಲಗ ಚಂದ್ರಶೇಖರ ರಾವ್, ಸೋಮಶೇಖರ್ ಜೆ.ಎಸ್, ಮಾಹಿನ್ ಕೇಳೋಟ್, ಇಬ್ರಾಹಿಂ ಪಾಲಾಟ್, ಅಡ್ವ.ಗೋವಿಂದನ್ ನಾಯರ್, ಕೂಕಳ್ ಬಾಲಕೃಷ್ಣನ್, ಬೇರ್ಕ ಅಬ್ದುಲ್ಲ ಕುಞ, ಕರುಣಾಕರನ್, ಆನಂದ ಕೆ.ಮವ್ವಾರ್, ಎಸ್.ಮುಹಮ್ಮದ್, ಅನ್ವರ್ ಓಜೋನ್, ನಾಸರ್ ಚೆರ್ಕಳ, ಸಿ.ಅಬೂಬಕರ್, ಅಲಿ ತುಪ್ಪಕಲ್, ಇ.ಅಬೂಬಕರ್, ಇ.ಆರ್.ಹಮೀದ್ ಉಪಸ್ಥಿತರಿದ್ದರು.
ಮೇ 4ರಂದು ಬದಿಯಡ್ಕದಲ್ಲಿ ಅಡಕೆ ಕೃಷಿಕರ ಸಂಗಮ-ಸಸಮಾಲೋಚನಾ ಸಭೆ
0
ಏಪ್ರಿಲ್ 18, 2023




