ಕಾಸರಗೋಡು: ನಗರದ ಹೊರವಲಯದಲ್ಲಿರುವ ನಾಯಮರ್‍ಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಉದ್ದೇಶಿತ 2.60 ಮೀಟರ್ ಅಂಡರ್‍ಪಾಸ್ ಹಾದಿಯಲ್ಲಿ ಬಸ್‍ಗಳಿಗೆ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಆಲಂಪಾಡಿಯಿಂದ ಕಾಸರಗೋಡು ಕಡೆಗೆ ಬರುವ ಬಸ್ಸುಗಳು ಸುಮಾರು 2 ಕಿ.ಮೀ ಕ್ರಮಿಸಿ ಸಂತೋಷ್ ನಗರದಲ್ಲಿ ಅಂಡರ್‍ಪಾಸ್ ಮೂಲಕ ಸಾಗಿ ಕಾಸರಗೋಡಿಗೆ ಬರಬೇಕಾಗಿದೆ. ಪೆರುಂಬಳ ಭಾಗಕ್ಕೆ ತೆರಳುವ ಹೋಗುವ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲೂ ಇದೇ ಪರಿಸ್ಥಿತಿಯಿದೆ. ಇದರಿಂದ ಇಂಧನ ಪೋಲಾಗುವುದಲ್ಲದೆ ಸಮಯವೂ ವ್ಯರ್ಥವಾಗಲಿದೆ. ರಾಷ್ಟ್ರೀಯ ಹೆದ್ದಾರಿ 66ರ ನಾಯಮರ್‍ಮೂಲೆಯಲ್ಲಿ ಫ್ಲೈಓವರ್ ನಿರ್ಮಿಸುವ ಬಗ್ಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳು, ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.
ಫ್ಲೈಓವರ್ ನಿರ್ಮಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರತಿಭಟನಾ ಸಮಿತಿ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿಗೆ ಬೆಂಬಲ ಸೂಚಿಸುವ ಬಗ್ಗೆ ಹಾಗೂ ಧರಣಿಯ ರೂಪುರೇಷೆ ತಯಾರಿಸುವ ಬಗ್ಗೆ ಬಸ್ ನಿರ್ವಾಹಕರ ಫೆಡರೇಶನ್ ಕಛೇರಿಯಲ್ಲಿ ಏ. 19 ಜಿಲ್ಲಾ ಬಸ್ ಆಪರೇಟರ್ಸ್ ಫೆಡರೇಶನ್ ಕಚೇರಿಯಲ್ಲಿ ಸಭೆ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.
ನಾಯಮರ್‍ಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ-ನಾಳೆ ಸಭೆ
0
ಏಪ್ರಿಲ್ 18, 2023




