HEALTH TIPS

ಜಾನುವಾರು ಮಾರಾಟಕ್ಕೂ ಆನ್‌ಲೈನ್‌ ವೇದಿಕೆ: 500 ಕೋಟಿ ರೂ. ಸಂಸ್ಥೆಯ ಮಾಲಕರಾದ ವಿದ್ಯಾರ್ಥಿಗಳು

               ವದೆಹಲಿ : ಐಐಟಿಯ ಇಬ್ಬರು ವಿದ್ಯಾರ್ಥಿನಿಯರು ಜಾನುವಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ʼಅನಿಮಲ್‌ʼ ಎಂಬ ಹೊಸ ಆನ್‌ಲೈನ್‌ ಪೋರ್ಟಲ್‌ ಪ್ರಾರಂಭಿಸಿ, ಯಶಸ್ಸು ಸಾಧಿಸಿದ್ದಾರೆ. ಈ ಪ್ಲಾಟ್‌ಫಾರ್ಮ್‌ನ ಆದಾಯವು 2022 ರ ಆರ್ಥಿಕ ವರ್ಷದಲ್ಲಿ ಕ್ಕೆ ₹7.4 ಕೋಟಿ ಗಳಿಸಿದ್ದು, ಈಗ ಕಂಪೆನಿಯ ಮೌಲ್ಯವು, 565 ಕೋಟಿ ರುಪಾಯಿಗೆ ಏರಿದೆ ಎಂದು ಸ್ಟಾರ್ಟ್‌ಅಪ್ ಪೀಡಿಯಾ ವರದಿ ಮಾಡಿದೆ.

                       ಲಿಂಕ್ಡ್‌ಇನ್ ಪೋಸ್ಟ್ ಪ್ರಕಾರ, ಬೆಂಗಳೂರು ಮೂಲದ ಈ (ಸ್ಟಾರ್ಟಪ್) ನವೋದ್ಯಮವನ್ನು 2019 ರಲ್ಲಿ ಸ್ಥಾಪಿಸಲಾಗಿದೆ. ಅನಿಮಲ್‌ನ ಸಂಸ್ಥಾಪಕರಾದ ಅನುರಾಗ್ ಬಿಸೋಯ್, ಕೀರ್ತಿ ಜಾಂಗ್ರಾ, ಲಿಬಿನ್ ವಿ ಬಾಬು, ಮತ್ತು ನೀತು ವೈ ಅವರು ಜಾನುವಾರು ಸಾಕುವ ರೈತರ ಜೀವನವನ್ನು ಉನ್ನತೀಕರಿಸುವ ಉದ್ದೇಶದಿಂದ ಈ ಉದ್ಯಮವನ್ನು ಆರಂಭಿಸಿದ್ದಾರೆ. ಜಾನುವಾರು ವ್ಯಾಪಾರ ಮತ್ತು ಹೈನುಗಾರಿಕೆ ಖರೀದಿ ಮತ್ತು ಮಾರಾಟಕ್ಕೆ ರೈತರಿಗೆ ಉತ್ತಮ ವೇದಿಕೆ ಒದಗಿಸಿದ ಈ ತಾಣವು ಸಾಕಷ್ಟು ಜನಪ್ರಿಯತೆ ಪಡೆದಿದೆ.

                  2021ರ ಆರ್ಥಿಕ ವರ್ಷದಲ್ಲಿ ₹ 5 ಲಕ್ಷದಿಂದ ಆರಂಭಗೊಂಡ ಉದ್ಯಮವು, 2022 ರ ಆರ್ಥಿಕ ವರ್ಷದಲ್ಲಿ 148 ಪಟ್ಟು ಹೆಚ್ಚಾಗಿ ₹ 7.4 ಕೋಟಿಗೆ ವಹಿವಾಟು ಮಾಡಿಕೊಂಡಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ನಲ್ಲಿ ಜಾನುವಾರುಗಳ ಮಾರಾಟ, ಕೊಳ್ಳುವಿಕೆ ಮಾತ್ರವಲ್ಲದೆ ಪ್ರಾಣಿಗಳ ಆರೋಗ್ಯ ಸೇವೆಗಳನ್ನು ಸಹ ಒದಗಿಸಲಾಗುತ್ತಿದೆ.

                  ಪ್ರಮುಖ ಹೂಡಿಕೆದಾರರಾದ Beenext, Sequoia, Nexus Ventures ನಿಂದ ಸುಮಾರು ₹170 ಕೋಟಿ ಹಣವನ್ನು ಸಂಗ್ರಹಿಸುವಲ್ಲಿ ಅನಿಮಲ್ ಯಶಸ್ವಿಯಾಗಿದೆ.

                    2022 ರಲ್ಲಿ ಕಂಪನಿಯು ತನ್ನ ಆದಾಯದ 90% ಅನ್ನು ಜಾನುವಾರು ವ್ಯಾಪಾರದಿಂದ ಮಾಡಿದ್ದರೆ, ಉಳಿದ 10% ಆದಾಯವನ್ನು ಆರೋಗ್ಯ ರಕ್ಷಣೆ, ಕೃತಕ ಗರ್ಭಧಾರಣೆ ಮತ್ತು ಮಾರುಕಟ್ಟೆ ಆಯೋಗದಿಂದ ಮಾಡಿಕೊಂಡಿದೆ.

                    ವಿಪರ್ಯಾಸವೆಂದರೆ, ಬೆಂಗಳೂರಿನಲ್ಲಿ ಶುರುವಾಗಿರುವ ಈ ಸ್ಟಾರ್ಟ್‌ಅಪ್‌ ಉದ್ಯಮದ ಅಪ್ಲಿಕೇಶನ್‌ನಲ್ಲಿ ಕನ್ನಡದ ಸೇವೆ ಇನ್ನೂ ಆರಂಭಗೊಂಡಿಲ್ಲ. ಬಹುತೇಕ ಹಿಂದಿ ಬೆಲ್ಟ್‌ ಗ್ರಾಹಕರನ್ನು ಕೇಂದ್ರೀಕರಿಸಿ ಅಪ್ಲಿಕೇಶನ್‌ ಅನ್ನು ನಿರ್ಮಿಸಿದಂತೆ ಕಾಣುತ್ತಿದ್ದು, ಡೌನ್‌ಲೋಡ್‌ ಮಾಡಿಕೊಂಡಾಗ ಹಿಂದಿಯಲ್ಲೇ ಸೇವೆಯನ್ನು ನೀಡಲಾರಂಭಿಸುತ್ತದೆ, ನಂತರ ಬೇರೆ ಭಾಷೆಗೆ ಬದಲಾಯಿಸಿಕೊಳ್ಳಬಹುದು. ಸದ್ಯ, ಹಿಂದಿ, ಇಂಗ್ಲಿಷ್‌, ಗುಜರಾತಿ, ತೆಲುಗು ಮತ್ತು ಮರಾಠಿ ಭಾಷೆಯಲ್ಲಿ ಸೇವೆ ಲಭ್ಯವಿದೆ. ಗ್ರಾಮೀಣ ಭಾಗದ ಜನರೇ ಗ್ರಾಹಕರಾಗಿರುವುದರಿಂದ ಇನ್ನಷ್ಟು ಸ್ಥಳೀಯ ಭಾಷೆಗಳಲ್ಲಿ ಸೇವೆ ವಿಸ್ತರಿಸಕೊಳ್ಳಬಹುದೆಂಬ ನಿರೀಕ್ಷೆಯಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries