HEALTH TIPS

ಭಾರತದ ಮುಖ್ಯ ನ್ಯಾಯಮೂರ್ತಿ ಆಗಬೇಕೆಂಬ ಇಂಗಿತ; ಬಾಲಕಿಯ ಕನಸಿಗೆ ಪ್ರಧಾನಿಯ ಸಲಹೆ ಹೀಗಿದೆ.

 

              ಇಂದೋರ್​: ಮಧ್ಯಪ್ರದೇಶದ ಇಂದೋರ್ ಮೂಲದ ಬಾಲಕಿ ತನಿಷ್ಕಾ ಸುಜಿತ್​ 15ನೇ ವಯಸ್ಸಿಗೆ ಬ್ಯಾಚುಲರ್​ ಆಫ್​ ಆರ್ಟ್ಸ್​​(BA) ಅಂತಿಮ ವರ್ಷದ ಪರೀಕ್ಷೆ ಬರೆಯಲು ಸಿದ್ದತೆ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಲಹೆ ಪಡೆದಿದ್ದಾಳೆ.

                 ಈ ವೇಳೆ ಬಾಲಕಿ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ(CJI) ಆಗಬೇಕೆಂಬ ಆಸೆ ವ್ಯಕ್ತಪಡಿಸಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಲಹೆ ಪಡೆದಿದ್ಧಾಳೆ.

                             2020ರಲ್ಲಿ ಕೋವಿಡ್​ನಿಂದಾಗಿ ತಂದೆ ಹಾಗೂ ತಾತನನ್ನು ಕಳೆದುಕೊಂಡ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವಾನ ಹೇಳಿದ್ದು ತಾನು ಅಂದುಕೊಂಡಿರುವ ದಾರಿಯಲ್ಲಿ ನಡೆಯುವಂತೆ ಪ್ರೋತ್ಸಾಹಿಸಿದರು ಎಂದು ಬಾಲಕಿ ನೆನಪಿಸಿಕೊಂಡಿದ್ದಾಳೆ.

                ಇಂದೋರ್ ನ ಪ್ರತಿಷ್ಠಿತ ದೇವಿ ಅಹಲ್ಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಐಆದ ತನಿಷ್ಕಾ ಏಪ್ರಿಲ್​ 19ರಿಂದ 28ರವರೆಗೆ ನಡೆಯುವ BA(Psychology) ಪರೀಕ್ಷೆ ಬರೆಯಲಿದ್ದಾರೆ.

                     ತಾನು BA ಪರೀಕ್ಷೆಯಲ್ಲಿ ಉತ್ತೀರ್ಣಳಾದ ನಂತರ USನಲ್ಲಿ ಕಾನೂನು ವ್ಯಾಸಂಗ ಮುಗಿಸಿಭಾರತದ ಮುಖ್ಯ ನ್ಯಾಯಮೂರ್ತಿ ಆಗಿ ಕಾರ್ಯ ನಿರ್ವಹಿಸಬೇಕೆಂಬ ಆಸೆಯನ್ನು ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ವ್ಯಕ್ತಪಡಿಸಿದ್ದಾಳೆ.

                    ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸುಪ್ರೀಂ ಕೋರ್ಟ್​ಗೆ ಹೋಗಿ ವಕೀಲರು ವಾದ ಮಂಡಿಸುವುದನ್ನು ನೋಡು ಇದು ನಿನಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕುರಿತು ಬಾಲಕಿ ಸಂತಸ ವ್ಯಕ್ತಪಡಿಸಿದ್ಧಾಳೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries