HEALTH TIPS

ಸಂಸದನ ಸ್ಥಾನ ಹೋಗಿರಬಹುದು ಆದರೆ.

 

                 ವಯನಾಡ್​: ಮೋದಿ ಉಪನಾಮ ಕುರಿತು ವ್ಯಂಗ್ಯವಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಸಂಸತ್​ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್​ ಗಾಂಧಿ ತಾವು ಪ್ರತಿನಿಧಿಸುತ್ತಿದ್ದ ವಯನಾಡ್​ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

                   ಬಿಜೆಪಿಯವರು ನನ್ನ ಮನೆಯನ್ನು ಕಿತ್ತುಕೊಂಡು ನನ್ನನ್ನು ಕೈಲಿಗೆ ಕಳುಹಿಸಬಹುದು. ಆದರೆ, ವಯನಾಡಿನ ಜನತೆಯ ಸಮಸ್ಯೆಗಳ ಕುರಿತು ನಾನು ಧ್ವನಿ ಎತ್ತುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

             ವಯನಾಡಿನ ಕಲ್​ಪ್ಪೆಟ್ಟಾದಲ್ಲಿ ಸತ್ಯಮೇವ ಜಯತೆ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ರಾಹುಲ್​ ಸಂಸತ್​ ಸ್ಥಾನ, ಸರ್ಕಾರಿ ಬಂಗಲೆಯನ್ನು ನನ್ನಿಂದ ಕಿತ್ತುಕೊಂಡು ಜೈಲಿಗೆ ಅಟ್ಟಬಹುದು. ಆದರೆ, ನಾನು ವಯನಾಡಿನ ಜನತೆಯನ್ನು ಪ್ರತಿನಿಧಿಸಲು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

                       ಇಷ್ಟು ವರ್ಷ ಕಳೆದರೂ ಬಿಜೆಪಿ ತನ್ನ ಎದುರಾಳಿ ಯಾವುದಕ್ಕೂ ಹೆದರುವುದಿಲ್ಲ ಎಂಬ ವಿಚಾರವನ್ನು ಅರ್ಥ ಮಾಡಿಕೊಳ್ಳದಿರುವುದು ನನಗೆ ಆಶ್ಚರ್ಯವಾಗಿದೆ. ಪೊಲೀಸರನ್ನು ನನ್ನ ಮನೆಗೆ ಕಳುಹಿಸಿದರೆ ಅಥವಾ ಸರ್ಕಾರಿ ನಿವಾಸವನ್ನು ಕಿತ್ತುಕೊಂಡ ಮಾತ್ರಕ್ಕೆ ನಾನು ಹೆದರುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ನಾನು ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇನೆ. ಆದರೆ, ಅವರಿಗೆ ಈ ವಿಷಯ ಅರ್ಥವಾಗಿಲ್ಲ ಎಂದು ಮಾತನಾಡುವ ವೇಳೆ ಬಿಜೆಪಿಯನ್ನು ಟೀಕಿಸಿದ್ದಾರೆ.

                ಸಂಸತ್​ ಸ್ಥಾನದಿಂದ ಅನರ್ಹಗೊಂಡ ಬಳಿಕ ವಯನಾಡ್​ಗೆ ಮೊದಲ ಬಾರಿ ಭೇಟಿ ನೀಡಿದ ರಾಹುಲ್​ ಗಾಂಧಿ ಕಲ್​ಪ್ಪೆಟ್ಟಾದಲ್ಲಿ ಬೃಹತ್​ ರ್‍ಯಾಲಿ ನಡೆಸಿದ ರಾಹುಲ್​ ಗಾಂಧಿಗೆ ಸಹೋದರಿ ಪ್ರಿಯಾಂಕ ಗಾಂಧಿ, ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​, ಕೇರಳ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ಸಾಥ್​ ನೀಡಿದ್ದರು.

                   ರೋಡ್​ ಶೋ ವೇಳೆ ಕಾಂಗ್ರೆಸ್​ ಪಕ್ಷದ ಬಾವುಟಗಳ ಬದಲಾಗಿ ಭಾರತದ ಧ್ವಜಗಳನ್ನು ಉಪಯೋಗಿಸಿದ್ದ ವಿಶೇಷವಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries