HEALTH TIPS

ಪ್ರಿಯಕರನ​ ಬಟ್ಟೆ ಬಿಚ್ಚಿ ಥಳಿಸಿದ ಯುವತಿ! ಒಂದು ದಿನದಲ್ಲಿ ಈಕೆ ಕೊಟ್ಟ ಕಾಟ ಆಘಾತಕಾರಿ

 

                ತಿರುವನಂತಪುರಂ: ಯುವಕನ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಆರೋಪದ ಮೇಲೆ ಯುವತಿಯೊಬ್ಬಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

                       ಬಂಧಿತಳನ್ನು ಲಕ್ಷ್ಮೀಪ್ರಿಯಾ ಎಂದು ಗುರುತಿಸಲಾಗಿದೆ. ಈಕೆ ವಾರ್ಕಳ ಮೂಲದವಳು. ಆಕೆಯ ಮೊಬೈಲ್​ ಟವರ್ ಲೊಕೇಶನ್ ಮೇಲೆ ಕೇಂದ್ರೀಕರಿಸಿ ನಡೆಸಿದ ತನಿಖೆಯ ಬಳಿಕ ನಿನ್ನೆ ರಾತ್ರಿ ತಿರುವನಂತಪುರದಲ್ಲಿ ಆಕೆಯನ್ನು ಬಂಧಿಸಲಾಗಿದೆ.

ಪೊಲೀಸರು ಆಕೆಯ ಬಂಧನವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಿದ್ದಾರೆ. ಆಕೆಯ ಹೊಸ ಲವರ್​ ಸೇರಿದಂತೆ ಐವರು ಪರಾರಿಯಾಗಿದ್ದಾರೆ.

                                ಕೈಕೊಟ್ಟು ಹೊಸ ಲವರ್​
                    ಏಪ್ರಿಲ್ 5ರಂದು ವಾರ್ಕಳದ ಆಯೂರಿನ ಯುವಕನಿಗೆ ಅಮಾನುಷ ಕಿರುಕುಳ ನೀಡಲಾಗಿತ್ತು. ವಾರ್ಕಳದ ಚೆರುನ್ನಿಯೂರ್​ ಮೂಲದ ಲಕ್ಷ್ಮೀಪ್ರಿಯಾ ಜತೆ ಯುವಕನಿಗೆ ಸಂಬಂಧವಿತ್ತು. ಕೆಲವು ದಿನಗಳ ಬಳಿಕ ಅವನಿಂದ ದೂರವಾಗಿ ಹೊಸ ಲವರ್​ ಹುಡುಕಿಕೊಂಡಿದ್ದಳು. ದೂರವಾದರೂ ತನ್ನ ಹಿಂದೆ ಬಿದ್ದಿದ್ದ ಯುವಕನನ್ನು ನಿರ್ಲಕ್ಷಿಸಲು ಗ್ಯಾಂಗ್​ ಒಂದನ್ನು ನೇಮಿಸಿಕೊಂಡಿದ್ದಳು.

                                     ಯುವಕನ ಸುಲಿಗೆ
                     ಹೊಸ ಲವರ್​ ಮತ್ತು ಗ್ಯಾಂಗ್​ ಜತೆ ಸೇರಿ ಲಕ್ಷ್ಮೀಪ್ರಿಯಾ ಯುವಕನ ಮನೆಗೆ ಹೋದಳು. ಬಳಿಕ ಆತನನ್ನು ಹೊರಗೆ ಕರೆದು, ಕಾರಿನಲ್ಲಿ ಕರೆದೊಯ್ದ ಆಕೆ, ಕಾರಿನ ಒಳಗಡೆಯೇ ಹಲ್ಲೆ ಮಾಡಿ, ಚಾಕು ತೋರಿಸಿ ಬೆದರಿಕೆ ಹಾಕಿದರು. ಕಾರು ಆಲಪ್ಪುಳ ತಲುಪಿದ ಬಳಿಕ ಕಾರಿನ ಚಾಲಕ ಕೆಳಗೆ ಇಳಿದು ಯುವಕನ ಸರ, ಮೊಬೈಲ್​ ಮತ್ತು 5 ಸಾವಿರ ರೂ. ಹಣ ಕಸಿದುಕೊಂಡನು. ಅಲ್ಲದೆ, ಗೂಗಲ್​ ಪೇನಿಂದ 3500 ರೂ. ಅನ್ನು ಗ್ಯಾಂಗ್​ ಪಾವತಿಸಿಕೊಂಡರು. ಎರ್ನಾಕುಲಂ ಬೈಪಾಸ್ ಬಳಿಯ ಮನೆಗೆ ತಲುಪಿದ ಗ್ಯಾಂಗ್​ ಮೊಬೈಲ್ ಚಾರ್ಜರ್ ಬಳಸಿ ಯುವಕನಿಗೆ ಶಾಕ್ ನೀಡಿದರು.

                                    ಬೆತ್ತಲೆ ಫೋಟೋ, ವಿಡಿಯೋ
                  ಗ್ಯಾಂಗ್​ ನೀಡಿದ ಬಿಯರ್ ಕುಡಿಯಲು ಯುವಕ ನಿರಾಕರಿಸಿದಾಗ, ಬಾಟಲಿಯಿಂದ ಆತನ ತಲೆಗೆ ಹೊಡೆದರು. ಬಳಿಕ ಯುವಕನ ಬಟ್ಟೆಯನ್ನು ಕಿತ್ತೆಸೆದು, ಬೆತ್ತಲೆ ಮಾಡಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿದರು. ಲಕ್ಷ್ಮೀಪ್ರಿಯಾ ಜತೆಗಿನ ಸಂಬಂಧದಿಂದ ಹಿಂದೆ ಸರಿಯುವಂತೆ ಗ್ಯಾಂಗ್​ ಕೇಳಿಕೊಂಡರು. ಮಾತು ಕೇಳದಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದರು.

                              ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿ

                ಮರುದಿನ ಲಕ್ಷ್ಮೀಪ್ರಿಯಾ ಗ್ಯಾಂಗ್​, ಯುವಕನನ್ನು ವೈಟ್ಟಿಲ ಬಸ್ ನಿಲ್ದಾಣದಲ್ಲಿ ಬಿಟ್ಟು, ಅಲ್ಲಿಂದ ಪರಾರಿಯಾದರು. ರಸ್ತೆ ಬದಿ ಮಲಗಿದ್ದ ಯುವಕನನ್ನು ಪೊಲೀಸರು ಕೊಚ್ಚಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಬಳಿಕ ಸಂಬಂಧಿಕರು ಮಾಹಿತಿ ಪಡೆದು ಯುವಕನನ್ನು ವೆಂಜರಮೂಡು ಗೋಕುಲಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಚಿಕಿತ್ಸೆ ಮುಂದುವರಿದಿದ್ದು, ಪ್ರಕರಣ ದಾಖಲಾಗಿದೆ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries