HEALTH TIPS

ಹಾಲಿ ಆರ್ಥಿಕ ವರ್ಷದ ಬೆಳವಣಿಗೆ ಮುನ್ನೋಟವನ್ನು 5.9%ಕ್ಕೆ ಇಳಿಸಿದ ಐಎಮ್‌ಎಫ್

 

                ವಾಶಿಂಗ್ಟನ್: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಅಂತರ್ರಾಷ್ಟ್ರೀಯ ಹಣಕಾಸು ನಿಧಿ (ಐಎಮ್‌ಎಫ್)ಯು ಮಂಗಳವಾರ ಹಿಂದಿನ 6.1%ದಿಂದ 5.9%ಕ್ಕೆ ಇಳಿಸಿದೆ. ಇದರ ಹೊರತಾಗಿಯೂ, ಜಗತ್ತಿನಲ್ಲಿ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿ ಮುಂದುವರಿಯಲಿದೆ.

                 ತನ್ನ ವಾರ್ಷಿಕ ವಿಶ್ವ ಆರ್ಥಿಕ ಮುನ್ನೋಟದಲ್ಲಿ, ಭಾರತದ 2024-25ನೇ ಸಾಲಿನ ಆರ್ಥಿಕ ಬೆಳವಣಿಗೆ ಮುನ್ನೋಟವನ್ನೂ ಐಎಮ್‌ಎಫ್ 6.3%ಕ್ಕೆ ತಗ್ಗಿಸಿದೆ. ಈ ವರ್ಷದ ಜನವರಿಯಲ್ಲಿ ಅದು ಈ ಅವಧಿಯ ಮುನ್ನೋಟವನ್ನು 6.8%ಕ್ಕೆ ನಿಗದಿಪಡಿಸಿತ್ತು.

                     ಕಳೆದ ಆರ್ಥಿಕ ವರ್ಷದ ಬೆಳವಣಿಗೆ ದರ 6.8% ಆಗಿತ್ತು. ಹಾಲಿ ವರ್ಷದಲ್ಲಿ ಅದರ ಮುನ್ನೋಟವನ್ನು ಈಗ 5.9%ಕ್ಕೆ ಇಳಿಸಿರುವುದು ಗಮನಾರ್ಹವಾಗಿದೆ.

                    ಐಎಮ್‌ಎಫ್ನ ಆರ್ಥಿಕ ಬೆಳವಣಿಗೆ ಮುನ್ನೋಟವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ)ನ ಮುನ್ನೋಟಕ್ಕಿಂತ ಕಡಿಮೆಯಾಗಿದೆ. ಭಾರತದ ಆರ್ಥಿಕ ಬೆಳವಣಿಗೆ 2022-23ರಲ್ಲಿ 7% ಮತ್ತು ಎಪ್ರಿಲ್ 1ರಂದು ಆರಂಭವಾಗಿರುವ ಹಾಲಿ ಹಣಕಾಸು ವರ್ಷದಲ್ಲಿ ಅದು 6.4% ಎಂಬುದಾಗಿ ಆರ್ಬಿಐ ಅಂದಾಜಿಸಿದೆ.

                  2022-23ರ ಸಂಪೂರ್ಣ ವರ್ಷದ ಜಿಡಿಪಿ ಸಂಖ್ಯೆಗಳನ್ನು ಸರಕಾರ ಇನ್ನಷ್ಟೇ ಬಿಡುಗಡೆಗೊಳಿಸಬೇಕಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries