HEALTH TIPS

ಭಾರತವು ಗಂಭೀರ ಮಾನಸಿಕ ಸ್ವಾಸ್ಥ ಬಿಕ್ಕಟ್ಟು ಎದುರಿಸುತ್ತಿದೆ:ಐಸಿಎಂಆರ್

                  ವದೆಹಲಿ:ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಇತ್ತೀಚಿನ ಅಧ್ಯಯನದಂತೆ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗಾಗಿ ಹೆಚ್ಚಿನ ವೆಚ್ಚವು ಭಾರತೀಯ ಕುಟುಂಬಗಳ ಆರೋಗ್ಯ ರಕ್ಷಣೆ ಬಜೆಟ್ ನನ್ನು ಹೆಚ್ಚಿಸುತ್ತಿದೆ ಮತ್ತು ಮಾನಸಿಕ ಅಸ್ವಸ್ಥ ಸದಸ್ಯರನ್ನು ಹೊಂದಿರುವ ಅಂದಾಜು ಶೇ.20ರಷ್ಟು ಕುಟುಂಬಗಳನ್ನು ಬಡತನಕ್ಕೆ ತಳ್ಳುತ್ತಿದೆ.

                 ಅಧ್ಯಯನವು 2018 ಜುಲೈ ಮತ್ತು ಡಿಸೆಂಬರ್ ನಡುವೆ ನ್ಯಾಷನಲ್ ಸ್ಯಾಂಪಲ್ ಸರ್ವೆ (ಎನ್‌ಎಸ್‌ಎಸ್) ನಡೆಸಿದ 1.18 ಲ.ಕುಟುಂಬಗಳು ಮತ್ತು 5.76 ಲ.ವ್ಯಕ್ತಿಗಳ ಸಮೀಕ್ಷೆಯನ್ನು ಆಧರಿಸಿದೆ. ಸಮೀಕ್ಷೆ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥತೆಯನ್ನು ವರದಿ ಮಾಡಿದ್ದ 6,679 ವ್ಯಕ್ತಿಗಳನ್ನು ಅಧ್ಯಯನವು ಒಳಗೊಂಡಿತ್ತು.
                   ಇದು ಭಾರತದಲ್ಲಿಯ ಇಂತಹ ಮೊದಲ ಅಧ್ಯಯನವಾಗಿದ್ದು,ಆರೋಗ್ಯ ರಕ್ಷಣೆಗಾಗಿ ಒಟ್ಟು ಕೌಟುಂಬಿಕ ಬಜೆಟ್ ನಲ್ಲಿ ಶೇ.18.1ಕ್ಕೂ ಹೆಚ್ಚಿನ ಮೊತ್ತ ಮಾನಸಿಕ ಆರೈಕೆಗಾಗಿ ವೆಚ್ಚವಾಗುತ್ತಿದೆ ಎನ್ನುವುದನ್ನು ಬಹಿರಂಗಗೊಳಿಸಿದೆ.

                    ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬೈಪೋಲಾರ್ ಡಿಸಾರ್ಡರ್ ಅಥವಾ ಉನ್ಮಾದ ಖಿನ್ನತೆ, ಬುದ್ಧಿಮಾಂದ್ಯತೆ, ಬೌದ್ಧಿಕ ದೌರ್ಬಲ್ಯಗಳು ಮತ್ತು ಖಿನ್ನತೆಯಲ್ಲದೆ ಅಸಹಜ ಚಿಂತನೆಗಳು,ಭಾವೋದ್ವೇಗಗಳು, ನಡವಳಿಕೆ ಮತ್ತು ಸಂಬಂಧಗಳು ಎಂದೂ ವರ್ಗಿಕರಿಸಲಾಗಿದೆ.

                  ದೇಶದ ಇತರ ಭಾಗಗಳಿಗೆ ಹೋಲಿಸಿದರೆ ದಮನ್ ಮತ್ತು ದಿಯು (ಶೇ.23.4),ಹಿಮಾಚಲ ಪ್ರದೇಶ (23.9) ಮತ್ತು ಸಿಕ್ಕಿಂ (ಶೇ.31.9) ನಂತಹ ಸಣ್ಣ ಪ್ರದೇಶಗಳು ಮಾನಸಿಕ ಅಸ್ವಸ್ಥತೆಗಳ ಚಿಕಿತ್ಸೆಗಾಗಿ ಹೆಚ್ಚು ಹಣವನ್ನು ವ್ಯಯಿಸುತ್ತಿವೆ. ದೊಡ್ಡ ರಾಜ್ಯಗಳ ಪೈಕಿ ಮಹಾರಾಷ್ಟ್ರ (ಶೇ.21.3) ಮತ್ತು ತೆಲಂಗಾಣ (ಶೆ.22.2) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಅಧ್ಯಯನದಂತೆ ಶೇ.59.5ರಷ್ಟು ಕುಟುಂಬಗಳು ಹೆಚ್ಚಿನ ಆರೋಗ್ಯ ವೆಚ್ಚಗಳಿಂದ ತತ್ತರಿಸುತ್ತಿವೆ.

                  ಎಲ್ಲ ಕಾಯಿಲೆಗಳ ಆರನೇ ಒಂದು ಭಾಗದಷ್ಟು ಖಿನ್ನತೆ,ಆತಂಕ,ಬೈಪೋಲಾರ್ ಡಿಸಾರ್ಡರ್ ಮತ್ತು ಸ್ಕಿಜೋಫ್ರೇನಿಯಾದಂತ ಮಾನಸಿಕ ಕಾಯಿಲೆಗಳಾಗಿದ್ದು,ಭಾರತವು ತೀವ್ರ ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಅಧ್ಯಯನವು ಹೇಳಿದೆ.

               ಒಟ್ಟಾರೆ ಶೇ.20.7ರಷ್ಟು ಕುಟುಂಬಗಳು ಬಡತನಕ್ಕೆ ತಳ್ಳಲ್ಪಟ್ಟಿವೆ. ದೇಶದಲ್ಲಿ ಆರೋಗ್ಯ ವೆಚ್ಚವನ್ನು ತಗ್ಗಿಸಲು ಮತ್ತು ಮಾನಸಿಕ ಅರೋಗ್ಯ ಸಮಸ್ಯೆಗಳ ಪ್ರಾರಂಭಿಕ ರೋಗನಿರ್ಣಯ ಮತ್ತು ನಿರ್ವಹಣೆಗಾಗಿ ತಳಮಟ್ಟದ ಕ್ರಮಗಳನ್ನು ಚುರುಕುಗೊಳಿಸುವ ನಿರ್ಣಾಯಕ ಅಗತ್ಯವಿದೆ ಎಂದು ಕೊಚ್ಚಿಯ ಅಮೃತಾ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಮತ್ತು ಅಧ್ಯಯನ ವರದಿಯ ಸಹಲೇಖಕ ಡಾ.ಡೆನ್ನಿ ಜಾನ್ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries