HEALTH TIPS

ಫೋನ್‌ ಸಿಮ್‌ ಜೋಪಾನ: ಸಿಮ್‌ ಸ್ವಾಪ್‌ನಿಂದ 72 ಲಕ್ಷ ಹಣ ಕಳೆದುಕೊಂಡ ಉದ್ಯಮಿ!

 

                ಕೋಲ್ಕತ್ತಾ :ಸ್ಮಾರ್ಟ್‌ಫೋನ್ ಮೂಲಕವೇ ಬ್ಯಾಂಕ್ ಖಾತೆಯನ್ನು ಉಪಯೋಗಿಸುವ ನಾವೆಲ್ಲಾ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಏಕೆಂದರೆ ಇಂದಿನ ದಿನಗಳಲ್ಲಿ ಗ್ರಾಹಕರಿಗೆ ವಂಚಿಸಿ ಅವರ ಖಾತೆಯನ್ನು ತಮ್ಮಲ್ಲಿರುವ ಸಿಮ್‌ಗೆ ಜೋಡಿಸಲು ಪ್ರಯತ್ನಿಸುವ ಹಗರಣಗಳು ಸದ್ದು ಮಾಡುತ್ತಿವೆ.

ಅದರಲ್ಲೂ ಸಿಮ್‌ ಸ್ವಾಪ್‌ ವಂಚನೆ ಎಲ್ಲರ ನಿದ್ದೆಗೆಡಿಸಿರೋದು ಖಂಡಿತ.

             ದೇಶದಲ್ಲಿ ಸಿಮ್‌ ಸ್ವಾಪ್‌ ವಂಚನೆಗೆ ಬಲಿಯಾಗಿ ಹಣ ಕಳೆದುಕೊಂಡ ಘಟನೆಗಳು ವರದಿಯಾಗುತ್ತಲೇ ಇವೆ. ಇದರಲ್ಲಿ ಕೆಲವು ಪ್ರಕರಣಗಳ ತನಿಖೆ ಇನ್ನು ನಡೆಯುತ್ತಲೇ ಇದೆ. ಅದರಂತೆ ಕೊಲ್ಕತ್ತಾದಲ್ಲಿ ನಡೆದಿದ್ದ ಸಿಮ್‌ ಸ್ವಾಪ್‌ ವಂಚನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೂಲಕ ಮತ್ತೊಮ್ಮೆ ಸಿಮ್‌ -ಸ್ವ್ಯಾಪಿಂಗ್‌ ಪ್ರಕರಣ ದೇಶದಲ್ಲಿ ಸದ್ದು ಮಾಡ್ತಿದೆ. ಹಾಗಾದ್ರೆ ಏನಿದು ಸಿಮ್‌ ಸ್ವ್ಯಾಪಿಂಗ್‌ ವಂಚನೆ? ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ಪ್ರಕರಣ?

                   ಇತ್ತೀಚಿಗೆ ಕೋಲ್ಕತ್ತಾ ಮೂಲದ ಉದ್ಯಮಿಯೊಬ್ಬರು ತಮಗೆ ಅರಿವಿಲ್ಲದಂತೆ ತಮ್ಮ ಬ್ಯಾಂಕ್‌ ಖಾತೆಯಿಂದ 72 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದರು. ಈ ಸಂಬಂಧ ಅವರು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಉದ್ಯಮಿಯ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಉದ್ಯಮಿಯ ಖಾತೆಯಿಂದ ಹಣ ಎಗರಿಸಲು ವಂಚಕರು ಸಿಮ್‌ -ಸ್ವ್ಯಾಪಿಂಗ್‌ ಮಾಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ ಉದ್ಯಮಿಯ ಸಿಮ್‌ ಸ್ವಾಪ್‌ ಮಾಡಿದ್ದ ಇಬ್ಬರು ವಂಚಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

                 ಸದ್ಯ ಸಿಮ್-ಸ್ವ್ಯಾಪಿಂಗ್‌ ಸ್ಕ್ಯಾಮ್‌ನಲ್ಲಿ ಭಾಗಿಯಾಗಿದ್ದಾರೆನ್ನಲಾದ ಸಂಜೀಬ್ ಹಲ್ದಾರ್ ಮತ್ತು ರಜತ್ ಕುಂದು ಎಂಬುವವರನ್ನು ಬಂಧಿಸಲಾಗಿದೆ. ಈ ಮೂಲಕ ಸಿಮ್‌ ಸ್ವಾಪಿಂಗ್‌ ಮೂಲಕ ಉದ್ಯಮಿಗೆ ಉಂಡೆನಾಮ ಹಾಕಿದ್ದ ವಂಚಕರು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಇನ್ನು ಇಂತಹ ವಂಚನೆಗಳು ನಡೆಯದಂತೆ ತಡೆಯಲು ಜನರು ಹೆಚ್ಚಿನ ಜಾಗೃತೆ ವಹಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.

'ಸಿಮ್ ಸ್ವ್ಯಾಪಿಂಗ್‌' ಎಂದರೇನು?

               ' ಸಿಮ್ ಸ್ವ್ಯಾಪಿಂಗ್‌' ಎಂದರೇ ಹೆಸರೇ ಸೂಚಿಸುವಂತೆ ನಿಮಗೆ ಅರಿವಿಲ್ಲದಂತೆ ನಿಮ್ಮ ಬಳಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಫೋನ್‌ ನಂಬರ್‌ ಅನ್ನು ಹೊಸ ಸಿಮ್‌ ಕಾರ್ಡ್‌ನಲ್ಲಿ ರಿಜಿಸ್ಟರ್‌ ಮಾಡಿಸುವುದು. ಅರೆ ನಿಮ್ಮ ಅನುಮತಿಯಿಲ್ಲದೆ ನಿಮ್ಮ ಫೋನ್‌ ನಂಬರ್‌ ಅನ್ನು ಬೇರೊಂದು ಸಿಮ್‌ ಕಾರ್ಡ್‌ಗೆ ರಿಜಿಸ್ಟರ್‌ ಹೇಗೆ ಮಾಡಿಸಲು ಸಾದ್ಯ ಅಂತಾ ನಾವಂದುಕೊಳ್ಳಬಹುದು. ಆದರೆ ವಂಚಕರು ನಮ್ಮನ್ನು ಸುಲಭವಾಗಿ ಯಾಮಾರಿಸುವ ಮೂಲಕ ಸಿಮ್‌ ಸ್ವಾಪಿಂಗ್‌ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ.

ಸಿಮ್ ಸ್ವ್ಯಾಪ್ ಸ್ಕ್ಯಾಮ್‌ ಹೇಗೆ ಸಾಧ್ಯ?

                ಸಿಮ್ ಬಳಸಿಕೊಂಡು ನಡೆಯುತ್ತಿರುವ ಮೊಬೈಲ್ ವಾಲೆಟ್ ಸೇವೆ, ಯುಪಿಐ ಪಾವತಿ ಸೇವೆಗಳು ಹೆಚ್ಚು ಬಳಕೆಗೆ ಬಂದ ನಂತರ ಹುಟ್ಟಿಕೊಂಡ ಸ್ಕ್ಯಾಮ್‌ ಇದಾಗಿದೆ. ಜನರ ಸಿಮ್‌ ಅನ್ನೇ ನಕಲು ಮಾಡಿ ಗ್ರಾಹಕರ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮಾಹಿತಿ ಎಗರಿಸಿ ಹಣ ದೋಚುವುದು ಈ ಸ್ಕ್ಯಾಮ್‌ನ ಮೂಲ ಉದ್ದೇಶವಾಗಿದೆ. ಕ್ರೆಡಿಟ್‌ ಕಾರ್ಡ್‌ನಲ್ಲಿ ಹಣ ದೋಚುವುದಕ್ಕೆ ವಂಚಕರಿಗೆ ಒಟಿಪಿಯ ಅಗತ್ಯವಿರುತ್ತದೆ, ಇದಕ್ಕಾಗಿ ವಂಚಕರು ಸಿಮ್‌ ಸ್ವ್ಯಾಪಿಂಗ್‌ ಮಾಡುತ್ತಿದ್ದಾರೆ. ಸಿಮ್‌ ಸ್ವ್ಯಾಪಿಂಗ್‌ ಮಾಡಿದರೆ ಗ್ರಾಹಕರ ಬಳಿ ಒಟಿಪಿ ಕೇಳಬೇಕಾದ ಅನಿವಾರ್ಯತೆ ಇರುವುದಿಲ್ಲ ಅನ್ನೊದು ತಲೆ ನೋವಿನ ವಿಚಾರವಾಗಿದೆ.

ಹೇಗೆ ನಡೆಯುತ್ತೆ 'ಸಿಮ್ ಸ್ವ್ಯಾಪ್'?

                  ನಿಮ್ಮ ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿ, ಅದೇ ನಂಬರ್‌ನ ಹೊಸ ಸಿಮ್ ಖರೀದಿಸುವುದು ವಂಚಕರ ಪ್ಲಾನ್‌ ಆಗಿರಲಿದೆ. ಇದಕ್ಕಾಗಿ ವಂಚಕರು ನಿಮ್ಮ ದಾಖಲೆಗಳನ್ನು ಕದಿಯುವ ಪ್ರಯತ್ನ ನಡೆಸುತ್ತಾರೆ. ಇಲ್ಲವೇ ನಿಮ್ಮಿಂದಲೇ ಸಿಮ್‌ ಅನ್ನು ಕಾಪಿ ಮಾಡಿಕೊಳ್ಳುವ ಸಾದ್ಯತೆ ಕೂಡ ಇದೆ. ಹೀಗೆ ಈ ಎರಡೂ ಹಂತಗಳಲ್ಲಿಯೂ ವಂಚಕರು ನಿಮ್ಮನ್ನು ಕ್ಷಣಾರ್ಧದಲ್ಲಿ ಮೋಸಗೊಳಿಸುತ್ತಾರೆ.

                  ವಂಚಕರು ಗ್ರಾಹಕರನ್ನು ಸುಲಭವಾಗಿ ಯಾಮಾರಿಸುವುದಕ್ಕಾಗಿ ನೀವು ಬಳಸುವ ಸಿಮ್‌ ಕಂಪೆನಿಯ ಕಸ್ಟಮರ್‌ ಕೇರ್‌ ಹೆಸರಿನಲ್ಲಿ ಕರೆ ಮಾಡುತ್ತಾರೆ. ನಂತರ ಗ್ರಾಹಕರ ಕರೆ ಸೇವೆಯನ್ನು ಇನ್ನಷ್ಟು ಸುಲಭಗೊಳಿಸುತ್ತೇವೆ? ಕಾಲ್‌ಡ್ರಾಫ್ಸ್ ಅನ್ನು ಸರಿಪಡಿಸುತ್ತವೇ ಎಂದು ಕರೆ ಬರಲಿದೆ. ಇದಕ್ಕಾಗಿ ನೀವು ನಿಮ್ಮ ಸಿಮ್‌ ಹಿಂಬದಿಯ ವಿಶಿಷ್ಟ 20 ಡಿಜಿಟ್ ನಂಬರ್‌ ಹೇಳುವಂತೆ ಹೇಳುತ್ತಾರೆ. ನಿಮ್ಮ ಸಿಮ್‌ನ 20 ಡಿಜಿಟ್ ಸಂಖ್ಯೆ ಪಡೆದ ವಂಚಕ, ಅಧಿಕೃತವಾಗಿಹೊಸ ಸಿಮ್ ಪಡೆಯಲು ಮುಂದಾಗುತ್ತಾನೆ. ಆಗ, ನಿಮ್ಮ ಫೋನ್‌ಗೆ ಟೆಲಿಕಾಂ ಕಂಪೆನಿಯಿಂದ ಕನ್ಫರ್ಮೇಷನ್ ಎಸ್‌ಎಂಎಸ್‌ ಬರುತ್ತದೆ. ಆಗ ವಂಚಕ, ನಿಮಗೆ ಕರೆ ಮಾಡಿ ಒಂದನ್ನು ಪ್ರೆಸ್‌ ಮಾಡಲು ಸೂಚಿಸುತ್ತಾನೆ. ನೀವು ಒತ್ತಿದರೆ, ನಿಮ್ಮ ಸಿಮ್ ಬ್ಲಾಕ್ ಆಗಿ ಅವನ ಬಳಿ ನಿಮ್ಮ ಸಿಮ್ ಇರುತ್ತದೆ. ನಂತರ ಕೆಲವೇ ಸೆಂಕೆಂಡುಗಳಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ವಂಚಕರು ಎಗರಿಸಿಬಿಡುತ್ತಾರೆ.


 

 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries