HEALTH TIPS

ಬದಿಯಡ್ಕದಲ್ಲಿ ಜಾನಪದ ಕಲಾವಿದ ಶಂಕರ ಸ್ವಾಮಿ ಕೃಪಾರ ಬೊಂದ್ಯೊ ತುಳು ಕವನ ಸಂಕಲನ ಬಿಡುಗಡೆ


           ಬದಿಯಡ್ಕ : ಬೊಳಿಕೆ ಜಾನಪದ ಕಲಾ ತಂಡದ ನಿರ್ದೇಶಕ, ತುಳು ಸಾಹಿತಿ,ಜಾನಪದ ಕಲಾವಿದ ಶಂಕರ ಸ್ವಾಮಿಕೃಪಾ ರಚಿಸಿದ ಬೊಂದ್ಯೊ ತುಳು ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಭಾನುವಾರ ಜರಗಿತು. ಮಾಧ್ಯಮ ಪ್ರಕಾಶನ ಬದಿಯಡ್ಕ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ,ಪತ್ರಕರ್ತ ಮಲಾರ್ ಜಯರಾಮ ರೈ ಕೃತಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಕವಿಗಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವವರು. ಆದ್ದರಿಂದ ತಾಳ್ಮೆ  ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಕಾದ ಲೋಹ ಬಳಿಕ ಪ್ರಜ್ವಲಿಸುವಂತೆ ಸಹನೆಯಿದ್ದ ಸಾಹಿತಿಗಳು ಮಾತ್ರ ಬದುಕಿನಲ್ಲಿ ಸಂತೃಪ್ತತೆ ಪಡೆಯಲು ಸಾಧ್ಯ. ಹಾಗಿದ್ದವರμÉ್ಟ ಓದುಗರ ಪ್ರೀತಿಗೂ ಪ್ರಶಸ್ತಿಗೂ ಪಾತ್ರರಾಗಬಲ್ಲರು ಎಂದರು.
          ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಸಭೆಯ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕ ಆಶೋಕ್ ಎಂ ಅರಿಯಪ್ಪಾಡಿ ಕೃತಿ ಪರಿಚಯಿಸಿದರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಪ್ರೊ.ಎ.ಶ್ರೀನಾಥ್ ಕಾಸರಗೋಡು, ಕೇರಳ ತುಳು ಅಕಾಡೆಮಿ ಸದಸ್ಯ, ರಂಗಕರ್ಮಿ ಉದಯ ಸಾರಂಗ್, ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಮುಖ್ಯ ಅತಿಥಿಗಳಾಗಿದ್ದರು. ಕೃತಿಕಾರ ಶಂಕರ ಸ್ವಾಮಿಕೃಪಾ ಉಪಸ್ಥಿತರಿದ್ದರು. ಮಾಧ್ಯಮ ಪ್ರಕಾಶನದ ಡಾ.ರಾಜೇಶ್ ಆಳ್ವ ಬದಿಯಡ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ರಾಮ ಪಟ್ಟಾಜೆ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries