HEALTH TIPS

ಬಾಲಕನೊಂದಿಗೆ ದಲೈಲಾಮಾರ ಅಸಭ್ಯ ವರ್ತನೆ, ವೀಡಿಯೊ ವೈರಲ್: ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ

                    ವದೆಹಲಿ: ದಲೈ ಲಾಮಾ ಅವರು ಬಾಲಕನ ತುಟಿಗೆ ಚುಂಬಿಸುತ್ತಿರುವುದು ಹಾಗೂ ಆತನಲ್ಲಿ ತನ್ನ ನಾಲಗೆಯನ್ನು ಚೀಪುವಂತೆ ಕೇಳುತ್ತಿರುವುದನ್ನು ಪ್ರದರ್ಶಿಸುವ ವೀಡಿಯೊದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

                    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಈ ವೀಡಿಯೊದಲ್ಲಿ ಧಾರ್ಮಿಕ ನಾಯಕ ದಲೈ ಲಾಮಾನಿಗೆ ಗೌರವ ಸಲ್ಲಿಸಲು ಬಾಗಿದ ಬಾಲಕನ ತುಟಿಗೆ ಅವರು ಚುಂಬಿಸುತ್ತಿರುವುದು ದಾಖಲಾಗಿದೆ.

                      ಬಾಲಕನಲ್ಲಿ ತನ್ನ ನಾಲಗೆಯನ್ನು ಚೀಪುವಂತೆ ಕೇಳಿದಾಗ ದಲೈ ಲಾಮಾ ತನ್ನ ನಾಲಗೆಯನ್ನು ಹೊರ ಚಾಚಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ''ನೀನು ನನ್ನ ನಾಲಗೆಯನ್ನು ಚೀಪಬಹುದೇ ?'' ಎಂದು ಬಾಲಕನಲ್ಲಿ ದಲೈ ಲಾಮಾ ಕೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಈ ವೀಡಿಯೊದ ಬಗ್ಗೆ ಟ್ವಟರ್ ಬಳಕೆದಾರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

                    ಈ ವೀಡಿಯೊವನ್ನು ಶೇರ್ ಮಾಡಿರುವ ಟ್ವಿಟರ್ ಬಳಕೆದಾರ ಜೂಸ್ಟ್ ಬ್ರೋಯೆಕರ್ಸ್, ಅಂದರೆ, ದಲೈ ಲಾಮಾ ಭೌದ್ಧ ಕಾರ್ಯಕ್ರಮದಲ್ಲಿ ಭಾರತೀಯ ಬಾಲಕನಿಗೆ ಚುಂಬಿಸಿದ್ದಾರೆ.ಆತನ ನಾಲಗೆಯನ್ನು ಸ್ಪರ್ಶಿಸಲು ಕೂಡ ಪ್ರಯತ್ನಿಸಿದ್ದಾರೆ. ಅವರು ನಿಜವಾಗಿ ''ನನ್ನ ನಾಲಗೆ ಚೀಪು'' ಎಂದು ಹೇಳಿದ್ದಾರೆ. ಅವರು ಅದನ್ನು ಯಾಕೆ ಮಾಡಿದರು? ಎಂದು ಪ್ರಶ್ನಿಸಿದ್ದಾರೆ. ''ಇದು ಅನಪೇಕ್ಷಿತ ಹಾಗೂ ದಲೈ ಲಾಮಾ ಅವರು ಈ ಕೆಟ್ಟ ನಡತೆಯನ್ನು ಯಾರು ಸಮರ್ಥಿಸಿಕೊಳ್ಳಬಾರದು'' ಎಂದು ಇನ್ನೋರ್ವ ಟ್ವಿಟರ್ ಬಳಕೆದಾರ ದೀಪಿಕಾ ಪುಷ್ಕರ್ ನಾಥ್ ಬರೆದಿದ್ದಾರೆ.

                    ''ನಾನೇನು ನೋಡುತ್ತಿದ್ದೇನೆ? ಇದು ದಲೈ ಲಾಮಾರೇ ? ಇದು ಅಸಹ್ಯಕರ. ಶಿಶು ಕಾಮಿಯನ್ನು ಬಂಧಿಸುವ ಅಗತ್ಯತೆ ಇದೆ'' ಎಂದು ಜಾಸ್ ಒಬೆರಾಯ್ ಟ್ವೀಟ್ ಮಾಡಿದ್ದಾರೆ. 2019ರಲ್ಲಿ ದಲೈ ಲಾಮಾ ಅವರು ತನ್ನ ಉತ್ತರಾಧಿಕಾರಿ ಮಹಿಳೆಯಾಗಿರಬೇಕು. ಅವರು ಸುಂದರವಾಗಿರಬೇಕು ಎಂದು ಹೇಳುವ ಮೂಲಕ ವಿವಾದ ಉಂಟು ಮಾಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries