HEALTH TIPS

ಮತ್ತೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸೋಕೆ ಬರುತ್ತಿದೆ ನೋಕಿಯಾ ಮೊಬೈಲ್! ಶೀಘ್ರವೇ ಹೊಸ ಸ್ಮಾರ್ಟ್‌ಫೋನ್ ಲಾಂಚ್

 

        ನೋಕಿಯಾ ಮೊಬೈಲ್ (Nokia Mobile)​ ಟೆಕ್ನಾಲಜಿ​​ ಲೋಕದಲ್ಲಿ ದೊಡ್ಡ ಕ್ರಾಂತಿ ಮಾಡಿದ ಬ್ರ್ಯಾಂಡ್​. ಸಾಮಾನ್ಯರ ಕೈಗೂ ಮೊಬೈಲ್​ ದಕ್ಕುವಂತೆ ಮಾಡಿದ ನೋಕಿಯಾ ಇಂದಿಗೂ ಅನೇಕರ ಮನಸಲ್ಲಿ ಹಸಿರಾಗಿದೆ. ಆದರೆ ಆ ನಂತರ ಬಂದ ಉತ್ತಮ ದರ್ಜೆಯ ಆಯಪಲ್ (Apple Company), ಸ್ಯಾಮ್​ಸಂಗ್ (Samsung)​, ಒಪ್ಪೋನಂತಹ ಮೊಬೈಲ್​ಗಳ ಅಬ್ಬರದಲ್ಲಿ ನೋಕಿಯಾ ತನ್ನ ಮಾರುಕಟ್ಟೆಯನ್ನೇ ಕಳೆದುಕೊಂಡಿತು.

                ಒಂದು ಕಾಲದಲ್ಲಿ ಫಿನ್​ಲ್ಯಾಂಡ್​ನ ಈ ಮೊಬೈಲ್ (Mobile)​ ಅನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಎಲ್ಲರ ಬದುಕಿನಲ್ಲಿ ಸ್ಥಾನ ಪಡೆದಿತ್ತು. ಆದ್ರೆ ಈಗ ಯಾರೇ ಮೊಬೈಲ್​ ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡುವಾಗ ನೋಕಿಯಾ ಅಂದ್ರೆ ಹಿಂದೇಟು ಹಾಕುತ್ತಾರೆ.

                ಇತ್ತೀಚೆಗೆ ಯಾವುದಾದರು ಹೊಸ ಬ್ರ್ಯಾಂಡ್ ಬಂದರೆ ಸಾಕು ಆ ಸ್ಮಾರ್ಟ್​​ಫೋನ್​ ಅನ್ನೇ ಖರೀದಿಸಲು ಮುಂದಾಗುತ್ತಾರೆ.. ಆದರೆ ನೆನಪಿರಲಿ, ನೋಕಿಯಾದ ಸುಗ್ಗಿ ಕಾಲ ಮತ್ತೆ ಬರಲಿದೆ. ತನ್ನ ಎಲ್ಲಾ ಪ್ರತಿಸ್ಪರ್ಧಿಗಳನ್ನು ಮೀರಿ ನಿಲ್ಲಲು ನೋಕಿಯಾ ಸಜ್ಜಾಗಿದೆ.

ಹೊಸ ಲೋಗೋ ಪರಿಚಯಿಸಿದ ನೋಕಿಯಾ

                ನೋಕಿಯಾ ಇತ್ತೀಚೆಗೆ ಹೊಸ ಲೋಗೋವನ್ನು ಪರಿಚಯಿಸಿದೆ. ಜೊತೆಗೆ ಹೊಸ ಯುಐ(ಬಳಕೆದಾರರ ಇಂಟರ್​ಫೇಸ್​ ) ಅನ್ನೂ ಕೂಡ ಪರಿಚಯಿಸಿದೆ. ಇದು ವಿನ್ಯಾಸ ಮತ್ತು ಆಯನಿಮೇಷನ್​ಗಳಲ್ಲಿ ವಿಭಿನ್ನ ಬದಲಾವಣೆ ತರುವ ಸಾಧ್ಯತೆಗಳಿವೆ. ಜೊತೆಗೆ ಫ್ಲಾಗ್​ಶಿಪ್​ ಬಗ್ಗೆಯೂ ಯೋಚಿಸುತ್ತಿದೆ. ಆ ಮೂಲಕ ಅತ್ಯುತ್ತಮ ಫೀಚರ್​ ಮತ್ತು ಕೈಗೆಟುಕುವ ದರದಲ್ಲಿ ಪೋನ್​ ಸಿಗುವಂತೆ ನೋಡಿಕೊಳ್ಳಲು ಚಿಂತಿಸುತ್ತಿದೆ.


               ಶೀಘ್ರದಲ್ಲಿಯೇ ಈ ಎಲ್ಲಾ ಅಂಶಗಳನ್ನು ಒಳಗೊಂಡ ಫೋನ್​ ಬಿಡುಗಡೆಗೆ ನೋಕಿಯಾ ಯೋಚಿಸುತ್ತಿದೆ. ಇದು ನೇರವಾಗಿ ಐಪೋನ್​ಗೆ ಸ್ಪರ್ಧೆಯೊಡ್ಡಲಿದೆಯಂತೆ.

ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​​

              ಕಂಪೆನಿಯ ನೂತನ ಯುಐ ಹೊಂದಿರುವ ಮೊದಲ ನೋಕಿಯಾ ಫೋನ್​ ಇದಾಗಿರಲಿದೆ. ಇನ್ನು ಈ ಸ್ಮಾರ್ಟ್​​ಫೋನ್​ ಕೆಲವೊಂದು ಫೀಚರ್ಸ್​​ಗಳು ಲೀಕ್​ ಆಗಿದ್ದು, ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಫೀಚರ್ಸ್​ ಹೇಗಿದೆ?

                 ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​​ ವಿಶಿಷ್ಟವಾದ ವಿನ್ಯಾಸ ಹೊಂದಿರುತ್ತದೆ. ಬೇಝ್​ಲೆಸ್​​ ಡಿಸ್​​ಪ್ಲೇಯೊಂದಿಗೆ ಫುಲ್​ ಸ್ಕ್ರೀನ್​ ಡಿಸ್ಪ್ಲೇ ಇರುತ್ತದೆ. ಹಿಂಭಾಗದಲ್ಲಿರುವ ಕ್ಯಾಮೆರಾ, ಆಯಪಲ್​ ಐಫೋನ್​ ಕ್ಯಾಮೆರಾ ಮಾದರಿಯಲ್ಲಿರಲಿದೆ.

ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​​


             ಐಫೋನ್​ನಂತೆಯೇ ಈ ಸ್ಮಾರ್ಟ್​ಫೋನ್​ನಲ್ಲೂ ಫ್ಲ್ಯಾಟ್​​ ಎಡ್ಜ್​ ಇರಲಿದ್ದು ಹಿಂಬದಿಯ ಅಂಚುಗಳು ಗುಂಡಾಗಿರುತ್ತೆ. ಇದು ಗ್ರಾಹಕರು ಫೋನ್​ ಹಿಡಿದುಕೊಳ್ಳಲು ಆರಾಮದಾಯಕ ಅನುಭವವನ್ನು ನೀಡುತ್ತದೆ.

ವಿಶೇಷತೆಗಳೇನು?

         ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​ ಮುಂಭಾಗವು 6.7 ಇಂಚಿನ AMOLED ಡಿಸ್ಪ್ಲೇ ಹೊಂದಿರುತ್ತದೆ. ಐಫೋನ್​ಗಿಂತಲೂ ತೆಳು ಬೇಝಲ್​​ ಸ್ಕ್ರೀನ್​ ಹೊಂದಿರುತ್ತದೆ. 120hz ರಿಫ್ರೆಶ್​ ರೇಟ್​​ ಮತ್ತು 1080*2400 ರೆಸಲ್ಯೂಷನ್​ ಹೊಂದಿದೆ. ಡಿಸ್ಪ್ಲೇ ಮೇಲ್ಭಾಗದ ಮಧ್ಯದಲ್ಲಿ 64MP ಪಂಚ್​ ಹೋಲ್​ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಕಾರ್ಯಕ್ಷಮತೆ ಹೇಗಿದೆ?

         ಸ್ನಾಪ್​ ಡ್ರಾಗನ್​ 8 GEN 2 ಚಿಪ್​​ ಒಳಗೊಂಡಿದೆ. ಜೊತೆಗೆ 8ಜಿಬಿ, 12ಜಿಬಿ ಮತ್ತು 16 ಜಿಬಿ ರ್‍ಯಾಮ್ ಆಯ್ಕೆಯೂ ಇದೆ. ಜೊತೆಗೆ 2 ಸ್ಟೋರೇಜ್​ ಆಯ್ಕೆಗಳಿವೆ. ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​​​ 256 ಜಿಬಿ ಮತ್ತು 512 ಜಿಬಿ ಸ್ಟೋರೇಜ್​ ಆಯ್ಕೆ ಲಭ್ಯವಿದೆ. ಎರಡೂ ಸ್ಟೋರೇಜ್​ಗಳಲ್ಲೂ UFS 4.0 ಫಾಸ್ಟೆಸ್ಟ್​​ ಸ್ಟೋರೇಜ್​ ತಂತ್ರಜ್ಞಾನವಿದೆ.

          ಹಿಂಬದಿಯ ಕ್ಯಾಮೆರಾದಲ್ಲಿ ಮೂರು ಕ್ಯಾಮೆರಾಗಳಿದೆ. 108 ಎಮ್​ಪಿ ಮುಖ್ಯ ಸಂವೇದಕ, 1 ಎಂಪಿ ಅಲ್ಟ್ರಾವೈಡ್​​​ ಸಂವೇದಕ ಮತ್ತು 5 ಎಂಪಿ ಮ್ಯಾಕ್ರೋ ಲೆನ್ಸ್​ ಹೊಂದಿದೆ. ಜೊತೆಗೆ 7,500mAh ಬ್ಯಾಟರಿ ಬ್ಯಾಕಪ್​ ಹೊಂದಿದೆ. ಈ ಬ್ಯಾಟರಿಯು ಫಾಸ್ಟ್​ ಚಾರ್ಜಿಂಗ್​ ಟೆಕ್ನಾಲಜಿಯನ್ನೂ ಒಳಗೊಂಡಿದೆ.

ಬೆಲೆ ಎಷ್ಟು?

          32,990 ರೂಪಾಯಿಗೆ ಲಭ್ಯವಿರುವ ಈ ಫೋನ್ ಕೆಂಪು, ಕಪ್ಪು, ಚಿನ್ನ ಮತ್ತು ಹಸಿರು ಈ ರೀತಿಯ​ 4 ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​​ ಆಗಸ್ಟ್​ 2023 ರಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪೆನಿ ಹೇಳಿದೆ.

             ಕಡಿಮೆ ದರದಲ್ಲಿ ಇಷ್ಟೆಲ್ಲಾ ವಿಶಿಷ್ಟತೆಗಳನ್ನು ಒಳಗೊಂಡ ಹೊಸ ನೋಕಿಯಾ ಫೋನ್​ಗಾಗಿ ಟೆಕ್​ ಪ್ರಿಯರು ಕಾಯುತ್ತಿದ್ದಾರೆ. ಆ ನಂತರ ಇನ್ನಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries