HEALTH TIPS

ಡ್ರೈವಿಂಗ್ ರೋಡ್ ಟೆಸ್ಟ್; ಕಾರಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಇರಬೇಕೆಂಬ ಕಾನೂನಿಗೆ ಬದಲಾವಣೆ


                ತಿರುವನಂತಪುರಂ: ಕಾರು ಸಹಿತ ದೊಡ್ಡ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ರಸ್ತೆ ಪರೀಕ್ಷೆಗೆ ಒಳಪಡುವ ವಾಹನದಲ್ಲಿ ಕುಳಿತಿರಬಹುದು ಎಂಬ ಕಾನೂನು ಜಾರಿಗೆ ಬರಲಿದೆ. ಈ ಕುರಿತು ಸಾರಿಗೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
             ಲಾಕ್‍ಡೌನ್ ನಂತರ ಚಾಲನಾ ಪರೀಕ್ಷೆಯನ್ನು ಪುನರಾರಂಭಿಸಿದಾಗ, ಒಬ್ಬ ವ್ಯಕ್ತಿಗೆ ಮಾತ್ರ ರಸ್ತೆ ಪರೀಕ್ಷೆಗೆ ಅವಕಾಶ ನೀಡಲಾಯಿತು. ಆ ನಿರ್ಬಂಧವನ್ನು ಈಗ ತೆಗೆದುಹಾಕಲಾಗಿದೆ. ಡ್ರೈವಿಂಗ್ ಟೆಸ್ಟ್‍ಗೆಂದು ಪುರುಷ ಇನ್ಸ್‍ಪೆಕ್ಟರ್‍ಗಳ ಜೊತೆ ಪ್ರಯಾಣಿಸುತ್ತಿದ್ದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರ ನಂತರ ನಿರ್ಬಂಧವನ್ನು ತೆಗೆದುಹಾಕಲಾಯಿತು.
           ವಾಹನ ನಿರೀಕ್ಷಕರ ಸಂಘವೂ ವಾಹನ ಚಾಲನಾ ಪರೀಕ್ಷೆಗೆ ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಮಂದಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿತ್ತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries