HEALTH TIPS

ಇನ್ನು ವೈದ್ಯಕೀಯ ಸಮ್ಮೇಳನಗಳಲ್ಲಿ ಮದ್ಯ ಸಮಾರಾಧನೆಗೆ ನಿಷೇಧ


                  ತಿರುವನಂತಪುರ: ವೈದ್ಯಕೀಯ ಸಮ್ಮೇಳನಗಳಲ್ಲಿ ಮದ್ಯ ಸಮಾರಾಧನೆಗೆ ನಿಷೇಧ ಹೇರಲಾಗಿದೆ.  ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಮದ್ಯದ ಬಳಕೆಯನ್ನು ನಿರ್ಬಂಧಿಸಲಾಗುವುದು.
              ಆರೋಗ್ಯ ಸೇವೆಗಳ ಮಹಾನಿರ್ದೇಶಕ ಪ್ರೊ. ಅತುಲ್ ಗೋಯಲ್ ದೇಶದ ಎಲ್ಲಾ ವೈದ್ಯಕೀಯ ಸಂಘಗಳಿಗೆ ಈ ಸಂಬಂಧ ಪತ್ರ ಕಳುಹಿಸಿದ್ದಾರೆ.
             ಆರೋಗ್ಯ ಕಾರ್ಯಕರ್ತರು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು. ವೈದ್ಯಕೀಯ ಸಂಘಗಳು ಮದ್ಯಪಾನದಿಂದ ದೂರವಿರುವುದರಿಂದ ಉತ್ತಮ ಮಾದರಿಯಾಗಬಹುದು ಎಂದು ತಿಳಿಸಿರುವರು. ಸಾಂಕ್ರಾಮಿಕವಲ್ಲದ ರೋಗಗಳು ದೇಶದ ವಾರ್ಷಿಕ ಸಾವಿನ 63 ಪ್ರತಿಶತವನ್ನು ಹೊಂದಿವೆ.
              ತಂಬಾಕು ಸೇವನೆ, ವ್ಯಾಯಾಮದ ಕೊರತೆ, ಮದ್ಯ ಸೇವನೆ ಮತ್ತು ಅನಾರೋಗ್ಯಕರ ಆಹಾರ ಸೇವನೆಯಿಂದ ಜೀವನಶೈಲಿ ರೋಗಗಳು ಉಂಟಾಗುತ್ತವೆ. ಜಗತ್ತಿನ ಶೇ. ಐದರಷ್ಟು ಕಾಯಿಲೆಗಳಿಗೆ ಮದ್ಯಪಾನವೇ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ವರದಿ ಪ್ರಕಟಿಸಿದೆ. ಇದೆಲ್ಲವನ್ನು ಎತ್ತಿ ತೋರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಾದ ಅಗತ್ಯವನ್ನು ಸಲಹೆಯಾಗಿ ತಿಳಿಸಲಾಗಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries