HEALTH TIPS

ಕಾವುಗೋಳಿ ಶಿವ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತ


                   ಕಾಸರಗೋಡು: ಇತಿಹಾಸ ಪ್ರಸಿದ್ಧವಾದ ಕಾಸರಗೋಡಿನ ಅತೀ ಪುರಾತನವಾದ ಕಾವುಗೋಳಿ ಶಿವ ಕ್ಷೇತ್ರದ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು.
              2023 ಎಪ್ರಿಲ್ 22 ರಿಂದ ಮೊದಲ್ಗೊಂಡು ಮೇ 1 ರ ತನಕ ದೇವಸ್ಥಾನದ ನವೀಕರಣ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧÀ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಪಠೇರಿ ಕಾವು ಮಠ, ಬ್ರಹ್ಮಶ್ರೀ ವಿಷ್ಣು ಪ್ರಕಾಶ ಪಠೇರಿ ಕಾವು ಮಠ ಅವರು ದೇವತಾ ಪ್ರಾರ್ಥನೆಯೊಂದಿಗೆ ಚಪ್ಪರ ಮುಹೂರ್ತ ನೆರವೇರಿಸಿದರು.
           ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟರಮಣ ಹೊಳ್ಳ, ನ್ಯಾಯವಾದಿ ಸುರೇಶ್, ಕೃಷ್ಣನ್ ಕತ್ತರ್, ಕಮಲಾಕ್ಷ, ಉಮೇಶ ಕಡಪುರ, ಸತ್ಯನಾರಾಯಣ ತಂತ್ರಿ, ಮಾಧವ ನಾಯಕ್, ಲವ ಮೀಪುಗುರಿ, ಮೀರಾ ಕಾಮತ್, ನಾರಾಯಣ ಬೀರಂತಬೈಲ್, ಎ.ಟಿ.ನಾೈಕ್, ಪ್ರಮೀಳಾ ಮಜಲು, ಜಯಭಾರತೀ ಕಾವು ಮಠ ಮೊದಲಾದವರು ಉಪಸ್ಥಿತರಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries