HEALTH TIPS

ಪೆರ್ಲ ಬಜಕೂಡ್ಲು ಜಾತ್ರಾಮಹೋತ್ಸವಕ್ಕೆ ಧ್ವಜಾರೋಹಣ

                  ಪೆರ್ಲ:  ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಧ್ವಜಾರೋಹಣ ನಡೆಯಿತು. ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿ ನೇತೃತ್ವ ವಹಿಸಿದ್ದರು.  ಗಣಪತಿ ಹವನ, ಶ್ರೀ ದೇವರ ರಾಜಾಂಗಣ ಪ್ರವೇಶ, ಶ್ರೀದೇವರ ಬೂತಬಲಿ ಉತ್ಸವ ನಡೆಯಿತು. ಸಂಜೆ ಪೆರ್ಲ ಶ್ರೀ ಅಯ್ಯಪ್ಪ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.
               3ರಂದು  ಮಧ್ಯಾಹ್ನ 12ರಿಂದ ಬಜಕೂಡ್ಲು ಶ್ರೀದುರ್ಗಾ ಬಂಟರ ಮಹಿಳಾ ಭಜನಾಸಂಘದಿಂದ ಭಜನೆ ನಡೆಯುವುದು. 4ರಂದು ನಡುದೀಪೋತ್ಸವ ಅಂಗವಾಗಿ ಮಧ್ಯಾಹ್ನ 12ರಿಂದ ಪೆರ್ಲ ಗಾನಸುಧಾ ಸಂಗೀತ ಶಾಲೆ ಸದಸ್ಯರಿಂದ ಭಕ್ತಿಸಂಗೀತ, ರಾತ್ರಿ 8ಕ್ಕೆ ದೀಪೋತ್ಸವ, ಶ್ರೀದೇವರ ಪಡುಭಾಗಕ್ಕೆ ಸವಾರಿಕಟ್ಟೆಪೂಜೆ ನಡೆಯುವುದು. 5ರಂದು ರಥೋತ್ಸವ ಅಂಗವಾಗಿ ಬೆಳಗ್ಗೆ 10ಕ್ಕೆ ಶ್ರೀದೇವರ ಬಲಿ ಉತ್ಸವ, ಅಯ್ಯಂಗಾಯಿ ದರ್ಶನ ಬಲಿ, ಮಧ್ಯಾಹ್ನ 12ಕ್ಕೆ ಪೆರ್ಲ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಸಂಘದಿಂದ ಭಜನೆ, ರಾತ್ರಿ 9ರಿಂದ ಶ್ರೀದೇವರ ಭೂತಬಲಿ, ಕಟ್ಟೆಪೂಜೆ, ರಥೋತ್ಸವ, ಸುಡುಮದ್ದುಪ್ರದರ್ಶನ,  ದರ್ಶನ, ಶಯನ ನಡೆಯುವುದು. 6ರಂದು 1.30ಕ್ಕೆ ಶ್ರೀದೇವರ ಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹನ ನಡೆಯುವುದು. ಮಧ್ಯಾಹ್ನ 2ಗಂಟೆಗೆ ಕೃಷ್ಣಕಿಶೋರ್ ಪೆರ್ಮುಖಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯುವುದು. ಈ ಸಂದರ್ಭ ಮನೆ ಮನೆ ಭಜನಾ ಅಭಿಯಾನದ ಉದ್ಘಾಟನೆ ನಡೆಯುವುದು.  7ರಂದು ಬೆಳಗ್ಗೆ 10ರಿಂದ ಹುಲಿಭೂತ ನೇಮ ನಡೆಯುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries