ಉಪ್ಪಳ: ನವಕೇರಳ ಕ್ರಿಯಾಯೋಜನೆಯ ಆದ್ರ್ರ ಮಿಷನ್‍ನ ಎರಡನೇ ಹಂತದ ಭಾಗವಾಗಿ ಪೈವಳಿಗೆ ಪಂಚಾಯತಿ ಬಾಯಾರು ಕುಟುಂಬ ಆರೋಗ್ಯ ಕೇಂದ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್ ಲೈನ್ ಮೂಲಕ ಉದ್ಘಾಟಿಸಿದರು. ಸಚಿವೆ ವೀಣಾ ಜಾರ್ಜ್ ಅಧ್ಯಕ್ಷತೆ ವಹಿಸಿದ್ದರು. ಪೈವಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಪುμÁ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಜುಲ್ಫಿಕರ್ ಕಯ್ಯಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರ್, ಬ್ಲಾಕ್ ಪಂಚಾಯಿತಿ ಸದಸ್ಯ ರಹಮತ್ ಮತ್ತಿತರರು ಮಾತನಾಡಿದರು. ವೈದ್ಯಾಧಿಕಾರಿ ಡಾ.ಗೌತಮ್ ಬಿ.ಆರ್ ಸ್ವಾಗತಿಸಿ, ಆರೋಗ್ಯ ನಿರೀಕ್ಷಕ ಎಸ್.ನಾರಾಯಣ್ ವಂದಿಸಿದರು.
ಬಾಯಾರು ಕುಟುಂಬ ಆರೋಗ್ಯ ಕೇಂದ್ರದ ಉದ್ಘಾಟನೆ
0
ಏಪ್ರಿಲ್ 18, 2023
Tags




.jpeg)
