ಪೆರ್ಲ: ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಎಲ್ಲಾ ವಿದ್ಯಾಲಯ ವಠಾರ ಶುಚೀಕರಣ ನಡೆಸುವ ನಿಟ್ಟಿನಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಠಾರದಲ್ಲಿ ಶುಚೀಕರಣಕಾರ್ಯ ಸೋಮವಾರ ಜರುಗಿತು.
ಬೇಸಿಗೆ ರಜೆ ಕಳೆದು ಶಾಲೆಗಳು ಪುನರಾರಂಭಗೊಳ್ಳುವ ಸಂದರ್ಭ ಶಾಲಾ ವಠಾರದಲ್ಲಿ ಶುಚೀಕರಣ ನಡೆಸುವುದರ ಜತೆಗೆ ವಿದ್ಯಾರ್ಥಿಗಳ ಸುರಕ್ಷತೆ ಖಚಿತಪಡಿಸಿಕೊಲ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲಾ ಆಡಳಿತ ಸಮಿತಿಯ ವೆಂಕಟ್ರಾಜ ಮಿತ್ರ, ಸದಾಶಿವ ಭಟ್ ಹರಿನಿಲಯ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ, ಮುಖ್ಯ ಶಿಕ್ಷಕ ರಾಜೇಂದ್ರ ಬಿ, ಹಿರಿಯ ಶಿಕ್ಷಕ ಕೇಶವ ಪ್ರಕಾಶ್, ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಶುಚೀಕರಣ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ನಿರ್ದೇಶಾನುಸಾರ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಶುಚೀಕರಣ ಕಾರ್ಯವನ್ನು ಏಕ ಕಾಲಕ್ಕೆ ನಡೆಸಲಾಯಿತು.
ಸರ್ಕಾರದ ಎರಡನೇ ವಾರ್ಷಿಕೋತ್ಸವ: ಪೆರ್ಲ ಶಾಲಾವಠಾರದಲ್ಲಿ ಶುಚೀಕರಣ
0
ಏಪ್ರಿಲ್ 18, 2023





