ಮಂಜೇಶ್ವರ: ಇತಿಹಾಸ ಪ್ರಸಿದ್ದ ಕೋಳ್ಯೂರು ಶ್ರೀಶಂಕರ ನಾರಾಯಣ ದೇವಸ್ಥಾನ ಸಮೀಪದ ಕಳಿಯೂರು ಶ್ರೀ ರಕ್ತೇಶ್ವರೀ ಸಾನಿಧ್ಯ ಪರಿಸರದಲ್ಲಿ ಬಂಟ ಸಮುದಾಯದ ಕಳಿಯೂರು ದೇವಸ್ಯಗುತ್ತು ಮನೆಯ ಸಾನಿಧ್ಯ ಶಕ್ತಿಗಳ ಬ್ರಹ್ಮಕಲಶೋತ್ಸವ ಮೇ1ರಿಂದ 4ರ ವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ದೈವಸ್ಥಾನದ ಪರಿಸರದಲ್ಲಿ ಜರಗಿತು. ಬಾಲಲಯದಲ್ಲಿ ಕರ್ಮಿಗಳು ವಿಶೇಷ ಪ್ರಾರ್ಥನೆಗೈದು ಬಿಡುಗಡೆಗೊಳಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಿಶೋರ್ ರೈ ದೇಲಂಪಾಡಿ, ಗೌರವಾಧ್ಯಕ್ಷ ಪಿ.ಟಿ. ಸುಬ್ಬಣ್ಣ ಶೆಟ್ಟಿ ಕಳಿಯೂರು, ಬಾಲಕೃಷ್ಣ ಶೆಟ್ಟಿ ಇಡ್ಯಾ, ಜಯಶಂಕರ ರೈ ಬೇಳ, ಸಾಯಿನಾಥ ಎ.ರೈ,ವಿಶ್ವನಾಥ ಶೆಟ್ಟಿ ಮೀಯಪದವು ಮೊದಲಾದವರು ಉಪಸ್ಥಿತರಿದ್ದರು.
ಕಳಿಯೂರು ದೇವಸ್ಯ ಗುತ್ತು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
0
ಏಪ್ರಿಲ್ 18, 2023




.jpg)
