HEALTH TIPS

ನಿತ್ಯಪುಷ್ಪದಿಂದ ಮಧುಮೇಹ ನಿಯಂತ್ರಣದಲ್ಲಿಡಬಹುದೇ? ಬಳಸುವುದು ಹೇಗೆ?

 

ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತಿದೆ, ಈ ಮಾತನ್ನು ನಾವು ಸತ್ಯವಾಗಿಸುತ್ತಲೇ ಇರುತ್ತೇವೆ ಅಲ್ವಾ? ನಮ್ಮ ಅನೇಕ ಆರೋಗ್ಯ ಸಮಸ್ಯೆಗೆ ಹಲವಾರು ನೈಸರ್ಗಿಕ ವಿಧಾನಗಳಿರುತ್ತವೆ, ಆದರೆ ಅವುಗಳ ಕಡೆ ಗಮನ ಕೊಡುವುದಿಲ್ಲ. ಬದಲಿಗೆ ದುಬಾರಿ ಔಷಧಿಯೇ ನಮಗೆ ಸರಿ ಎಂಬ ಧೋರಣೆ ನಮ್ಮದು ಅಲ್ವಾ. ಆಯುರ್ವೇದ ನೈಸರ್ಗಿಕ ವಸ್ತುಗಳನ್ನು ಬಳಸಿ ಕಾಯಿಲೆಯನ್ನು ಗುಣಪಡಿಸುವ ಚಿಕಿತ್ಸಾ ವಿಧಾನವಿದೆ.

ಇದರಲ್ಲಿ ಮಧುಮೇಹ ಸಮಸ್ಯೆ ಬಗೆಹರಿಸಲು ಹಲವಾರು ನೈಸರ್ಗಿಕ ವಿಧಾನಗಳಿವೆ,ಅದರಲ್ಲೊಂದು ನಿತ್ಯಪುಷ್ಪ ಹೂಗಳು. ಸಾಮಾನ್ಯವಾಗಿ ಈ ಹೂವಿನ ಗಿಡ ಬಹುತೇಕ ಮನೆಗಳಲ್ಲಿ ಇದ್ದೇ ಇರುತ್ತದೆ. ಈ ಗಿಡ ನೆಟ್ಟರೆ ಸುಲಭವಾಗಿ ಬೆಳೆಯುವುದು. ಹಳ್ಳಿಗಳಲ್ಲಿ ಈ ಗಿಡವನ್ನು ಹೆಚ್ಚು ಆರೈಕೆ ಮಾಡದಿದ್ದರೂ ಅಲ್ಲಲ್ಲಿ ಹುಟ್ಟಿಕೊಂಡಿರುತ್ತದೆ. ಆದ್ದರಿಂದಲೇ ಈ ಗಿಡ ಬಹುತೇಕ ಮನೆಗಳಲ್ಲಿ ಇರುತ್ತದೆ. ಈ ನಿತ್ಯಪುಷ್ಪಾ ಗಿಡ ಮಧುಮೇಹಕ್ಕೆ ತುಂಬಾನೇ ಪರಿಣಾಮಕಾರಿ, ಹೇಗೆ ಎಂದು ನೋಡೋಣ ಬನ್ನಿ:

ಮಧುಮೇಹ: ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಬದಲಾದ ನಮ್ಮ ಜೀವನಶೈಲಿ ಈ ಮಧುಮೇಹದ ಸಮಸ್ಯೆ ಹೆಚ್ಚಾಗಲು ಒಂದು ಕಾರಣವಾಗಿದೆ. ಸಾಕಷ್ಟು ದೈಹಿಕ ವ್ಯಾಯಾಮ ಇಲ್ಲದಿರುವುದು, ಆಹಾರಶೈಲಿ ಇವೆಲ್ಲಾ ಮಧುಮೇಹದ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ.

ನಿತ್ಯ ಪುಷ್ಪಎಂಬ ಅದ್ಭುತ ಸಸ್ಯ: ಮಧುಮೇಹಿಗಳಿಗೆ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಮಧುಮೇಹ ಒಳ್ಳೆಯದು ಎಂದು ಅಧ್ಯಯನಗಳು ಕೂಡ ಹೇಳಿವೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಹಾಗೂ ಕ್ಯಾನ್ಸರ್‌ನಾಶಕ ಗುಣಗಳಿಂದಾಗಿ ಇದೊಂದು ಅದ್ಭುತವಾದ ಸಸ್ಯವಾಗಿದೆ. ಈ ನಿತ್ಯಪುಷ್ಪಾವನ್ನು ಅನೇಕ ಬಗೆಯ ಕ್ಯಾನ್ಸರ್‌ಗುಣಪಡಿಸಲು ಬಳಸಲಾಗುವುದು, ಅಲ್ಲದೆ ಮಧುಮೇಹ, ಅತ್ಯಧಿಕ ರಕ್ತದೊತ್ತಡ ಈ ಬಗೆಯ ಸಮಸ್ಯೆ ತಡೆಗಟ್ಟಲು ಕೂಡ ಪರಿಣಾಮಕಾರಿಯಾಗಿದೆ. ಆದರೆ ನೀವು ಈ ನಿತ್ಯಪುಷ್ಪಾವನ್ನು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಬಳಸಬೇಕು. ಇದನ್ನು ಹೇಗೆ ಬಳಸಬೇಕೆಂದು ನೀವು ಆಯುರ್ವೇದ ವೈದ್ಯರ ಸಲಹೆ ಪಡೆಯಬಹುದು.

ನಿತ್ಯ ಪುಷ್ಪ ಟೈಪ್ 1 ಹಾಗೂ ಟೈಪ್‌ 2 ಮಧುಮೇಹಿಗಳಲ್ಲಿ ಯಾರಿಗೆ ಒಳ್ಳೆಯದು?
* ಟೈಪ್‌ 1 ಎಂದರೆ ಇನ್ಸುಲಿನ್ ಕೊರತೆಯಿಂದಾಗಿ ಉಂಟಾಗುವ ಸಮಸ್ಯೆಯಾಗಿದೆ. ಆದ್ದರಿಂದ ನಿತ್ಯಪುಷ್ಪಾ ಇಂಥವರಿಗೆ ಪರಿಣಾಮ ಬೀರುವುದಿಲ್ಲ. ಆದರೆ ಟೈಪ್ 2ಮಧುಮೇಹಿಗಳು ಅಥವಾ ಮಧುಮೇಹ ಬಾರ್ಡರ್ ಲೈನ್‌ನಲ್ಲಿರುವವರು ಆಯುರ್ವೇದ ವೈದ್ಯರ ಸಲಹೆ ಪಡೆದು ಬಳಸಬಹುದು.
* ನಿತ್ಯಪುಷ್ಪಾ ಬಳಸುವುದರಿಂದ ವ್ಯಕ್ತಿಯ ಕಿಡ್ನಿ, ಹೃದಯ, ಲಿವರ್ ಅಥವಾ ದೇಹದ ಇತರ ಭಾಗಗಳಿಗೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ.

ನಿತ್ಯ ಪುಷ್ಪವನ್ನು ಮಧುಮೇಹಿಗಳು ಹೇಗೆ ಬಳಸಬೇಕು?
ನಿತ್ಯಪುಷ್ಪಾದ ಹೂ ಹಾಗೂ ಎಲೆಗಳನ್ನು ಮಧುಮೇಹ ನಿಯಂತ್ರಣಕ್ಕೆ ಔಷಧಿಯಾಗಿ ಬಳಸಬಹುದು.
* ಇದರ ಎಲೆಯ ರಸ ಅಥವಾ ಇದರ ಬೇರು, ಕಾಂಡ ಇವುಗಳನ್ನು ಮಧುಮೇಹಿಗಳಿಗೆ ನೀಡಬಹುದು.
* ಮಧುಮೇಹಿಗಳು ದಿನಾ ಇದರ 4-5 ಎಲೆಗಳನ್ನು ತಿಂದರೆ ಮಧುಮೇಹ ನಿಯಂತ್ರಣದಲ್ಲಿಡಬಹುದು.
* ನೀವು ಇಡೀ ಗಿಡವನ್ನು ಒಣಗಿಸಿ ಪುಡಿ ಮಾಡಿ ಅದನ್ನು ದಿನ ನಿತ್ಯ ಒಂದು ಚಮಚ ಬಳಸಬಹುದು.
* 6-7 ಎಲೆಗಳನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿಡಬಹುದು.

ಯಾರಿಗೆ ಒಳ್ಳೆಯದಲ್ಲ?
* ಅಲ್ಸರ್, ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆ ಇರುವವರಿಗೆ ಒಳ್ಳೆಯದಲಲ್.
* ಗರ್ಭಿಣಿಯರು ಬಳಸಬೇಡಿ
* ಎದೆಹಾಲುಣಿಸುವ ತಾಯಂದಿರು ಬಳಸಬೇಡಿ.


 
Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries