HEALTH TIPS

ಮಕ್ಕಳಿಗೆ ಬೇಸಿಗೆ ರಜೆ ಸಂಭ್ರಮ: ಈ ಟಿಪ್ಸ್ ಒಂದೇ ಮಗುವಿರುವ ಪೋಷಕರಿಗಾಗಿ

 ಬೇಸಿಗೆ ರಜೆ ಶುರುವಾಗಿದೆ. ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಪರೀಕ್ಷೆಯಿಲ್ಲ, ದಿನಾ ಹೋಂ ವರ್ಕ್‌ ಇಲ್ಲ ಖುಷಿಯೋ ಖುಷಿ. ಈ ಖುಷಿ ತುಂಬಾ ರಜೆ ಮುಗಿಯುವವರೆಗೆ ಇರಬೇಕೆಂದರೆ ಅಜ್ಜಿ ಮನೆ, ಚಿಕ್ಕಮ್ಮ ಮನೆ ಅಂತ ಟ್ರಿಪ್‌ ಹೋಗಬೇಕು. ಆದರೆ ಅದೆಲ್ಲಾ 80, 90 ಮಕ್ಕಳ ಬಾಲ್ಯ ಅಂತ ಹೇಳಬಹುದು. ಈಗ ಶಾಲಾ ರಜೆ ಬಂತೆಂದರೆ ಸಮ್ಮರ್‌ ಕ್ಯಾಂಪ್‌ ಅಂತ ಶುರುವಾಗುವುದು. ಮಕ್ಕಳನ್ನು ಸಮ್ಮರ್‌ ಕ್ಯಾಂಪ್‌ಗೆ ಕಳುಹಿಸುತ್ತಾರೆ.

ಅದರಲ್ಲೂ ಸಮ್ಮರ್‌ ಕ್ಯಾಂಪ್‌ಗಳು ಮಧ್ಯಮವರ್ಗದವರಿಗೆ ತುಸು ದುಬಾರಿ ಅನಿಸುವುದರಿಂದ ಕೆಲವೊಮ್ಮೆ ಕಳುಹಿಸಲು ಸಾಧ್ಯವಾಗಲ್ಲ. ಮಕ್ಕಳು ಮನೆಯಲ್ಲಿ ಟೈಮ್‌ ಕಳೆಯಬೇಕು. ಆವಾಗ ಮಕ್ಕಳು ಅನಿವಾರ್ಯವಾಗಿ ಟಿವಿ ನೋಡುತ್ತಾ ಅಥವಾ ಮೊಬೈಲ್‌ ನೋಡುತ್ತಾ ಸಮಯ ಕಳೆಯುತ್ತಾರೆ. ಅದರಲ್ಲೂ ಒಂದೇ ಮಗುವಾದರೆ ಆ ಮಗುವಿಗೆ ಬೇಸಿಗೆ ರಜೆಯೆಂದರೆ ಸಕತ್ ಬೋರ್‌ ಅನಿಸಲಾರಂಭಿಸುತ್ತದೆ. ನಿಮಗೆ ಕೂಡ ಒಂದೇ ಮಗುವಾದರೆ ಬೇಸಿಗೆ ರಜೆಯನ್ನು ಅದು ಖುಷಿ-ಖುಷಿಯಾಗಿ ಕಳೆಯಲು ಏನು ಮಾಡಬೇಕು ಎಂದು ನೋಡೋಣ:

1. ನಿಮ್ಮ ಮಗುವಿಗಾಗಿ ಒಂದು ಫ್ರೆಂಡ್ಸ್ ಗುಂಪು ಮಾಡಿ:
ನಗರ ಪ್ರದೇಶದಲ್ಲಿ ಜನರು ತಾವಾಯ್ತು ತಮ್ಮ ಪಾಡಾಯ್ತು ಎಂದು ಇದ್ದು ಬಿಡುತ್ತಾರೆ. ನೀವು ಸ್ವಲ್ಪ ಎಫರ್ಟ್ ಹಾಕಲೇಬೇಕು. ನಿಮ್ಮ ಅಕ್ಕಪಕ್ಕದವರನ್ನು ಮಾತನಾಡಿಸಿ. ಅವರ ಮಕ್ಕಳು ಹಾಗೂ ನಿಮ್ಮ ಮಗುವನ್ನು ಜೊತೆಗೆ ಸೇರಿಸಿ ಆಟ ಆಡಿಸೋಣವೇ ಎಂದು ಕೇಳಿ ನೋಡಿ. ಅವರು ಖಂಡಿತ ಒಪ್ಪುತ್ತಾರೆ. ಮಕ್ಕಳೆನ್ನೆಲ್ಲಾ ಜೊತೆ ಸೇರಿಸಿ ಏನಾದರೂ ಕ್ರಿಯೇಟಿವ್ ಆಗಿ ಏನಾದರೂ ಮಾಡಿ. ನಿಮ್ಮಲ್ಲಿ ಏನಾದರೂ ಕೌಶಲ್ಯವಿದ್ದರೆ ಉದಾಹರಣೆಗೆ ಮ್ಯೂಸಿಕ್, ಡ್ಯಾನ್ಸ್ ಅವರಿಗೆ ಕಲಿಸಿಕೊಡಿ. ಇಲ್ಲಾ ನಿಮ್ಮ ಪರಿಚಿತರ ಸಹಾಯವನ್ನು ಕೂಡ ಪಡೆಯಬಹುದು. ಈ ರೀತಿ ನೀವು 10 ವರ್ಷದ ಕೆಳಗಿನ ಮಕ್ಕಳಿಗೆ ಮಾಡಿದರೆ ಅವರು ತುಂಬಾ ಖುಷಿ ಪಡುತ್ತಾರೆ. ನಿಮ್ಮ ಮಗುವಿಗೂ ಮನೆಯಲ್ಲಿ ಒಂಟಿ ಅನಿಸಲ್ಲ. ಈ ಬೇಸಿಗೆ ರಜೆಯಲ್ಲಿ ಟ್ರೈ ಮಾಡಿ ನೋಡಿ ಖಂಡಿತ ಈ ಫ್ಲ್ಯಾನ್ ವರ್ಕ್‌ ಆಗಿಯೇ ಆಗುತ್ತದೆ.

2. ಸಂಜೆ ಹೊತ್ತಿಗೆ ಪಾರ್ಕ್‌ಗೆ ಕರೆದುಕೊಂಡು ಹೋಗಿ:
ದಿನಾ ಪಾರ್ಕ್‌ಗೆ ಕರೆದುಕೊಂಡು ಹೋಗಿ , ದಿನಾ ಹೋಗುತ್ತಿದ್ದರೆ ಅಲ್ಲೊಂದಿಷ್ಟು ಫ್ರೆಂಡ್ಸ್ ಸಿಗುತ್ತಾರೆ, ಮಕ್ಕಳ ಜೊತೆ ಖುಷಿಯಿಂದ ಆಟ ಆಡಿ ಸುಸ್ತಾಗಿ ಮನೆಗೆ ಬರುತ್ತಾರೆ. ಮನೆಗೆ ಬಂದ ಮೇಲೆ ಮತ್ತೆ ಟಿವಿ ಅಂತ ತುಂಬಾ ಸಮಯ ಕಳೆಯದೆ ಬೇಗನೆ ನಿದ್ದೆಗೆ ಜಾರುತ್ತಾರೆ. ಇದರಿಂದಾಗಿ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

3. ನಿಮ್ಮ ನೆಂಟರಿಷ್ಟರ ಮಕ್ಕಳ ಮನೆಗೆ ಕರೆಯಿರಿ ಅಥವಾ ಅವರ ಮನೆಗೆ ಸ್ವಲ್ಪ ದಿನ ಕಳುಹಿಸಿ:
ನಿಮ್ಮ ಮಗುವಿಗೆ ತುಂಬಾನೇ ಒಂಟಿತನ ಅಂತ ಕಾಡುತ್ತಿದ್ದರೆ ನಿಮ್ಮ ಸಹೋದರ-ಸಹೋದರಿಯ ಮಕ್ಕಳನ್ನು ಮನೆಗೆ ಕರೆಸಿ ಅಥವಾ ನಿಮ್ಮ ಮಗುವನ್ನು ಅವರ ಮನೆಗೆ ಕಳುಹಿಸಿ ಕೊಡಿ. ಒಂದಿಷ್ಟು ದಿನ ಅಲ್ಲಿ ಕಳೆಯಲಿ. ನೀವು ನಗರ ಪ್ರದೇಶದಲ್ಲಿದ್ದರೆ ಹಳ್ಳಿ ಕಡೆ ಕಳುಹಿಸಿಕೊಡಿ. ಮಕ್ಕಳಿಗೂ ಒಂಥರಾ ಪಂಜರದಿಂದ ಹೊರಬಂದ ಅನುಭವ ಉಂಟಾಗುವುದು. ತೋಟದಲ್ಲಿ ಸಿಗುವ ಹಣ್ಣುಗಳನ್ನು ಸವಿಯುತ್ತಾ ಸ್ವಲ್ಪ ಜಗಳ, ಕಿತ್ತಾಟ ಎಲ್ಲಾ ಮಾಡುತ್ತಾ, ಲಾಗ ಹಾಕ ಕುಣಿಯುತ್ತಾ ಮಸ್ತಾಗಿ ರಜೆಯನ್ನು ಕಳೆಯುತ್ತಾರೆ. ಈ ರೀತಿ ಕಳುಹಿಸಿದರೆ ಊರಿಂದ ಬಂದರೂ ಆ ಗುಂಗು ಮಾತ್ರ ಹೋಗಲ್ಲ.

4. ಸ್ವಲ್ಪ ದೊಡ್ಡ ಮಕ್ಕಳಾದರೆ ಸ್ನೇಹಿತರಂತೆ ವರ್ತಿಸಿ:
ಉಳಿದ ಸಮಯದಲ್ಲಿ ನೀವು ಓದು ಓದು ಅಂತ ಹೇಳಿ-ಹೇಳಿ ಅವರಿಗೂ ನಿಮಗೂ ಮಾತುಕತೆಯೇ ಕಡಿಮೆಯಾಗಿರುತ್ತದೆ. ಈ ಅಮ್ಮ-ಅಪ್ಪ ಸದಾ ಓದು ಓದು ಅಂತಾರೆ ಎಂಬುವುದೇ ತಲೆಯಲ್ಲಿ ಕೂತಿರುತ್ತದೆ. ಅದನ್ನು ಬದಲಾಯಿಸಲು ಈ ಬೇಸಿಗೆ ತಕ್ಕ ಸಮಯ ನೋಡಿ. ಮಕ್ಕಳ ಜೊತೆ ಸ್ನೇಹಿತರಂತೆ ವರ್ತಿಸಿ. ನೀವು ಕೆಲಸ-ಕೆಲಸ ಅಂತ ಕೂರದೆ ಸ್ವಲ್ಪ ಬಿಡುವು ಮಾಡಿಕೊಂಡು ಅವರ ಜೊತೆ ಟೈಮ್‌ ಕಳೆಯಿರಿ. ಅವರ ಜೊತೆ ಆಟವಾಡಿ, ಆತ್ಮೀಯರಾಗಿ ಮಾತನಾಡಿ. ಹದಿಹರೆಯದ ಮಕ್ಕಳ ಜೊತೆ ಹೀಗೆ ವರ್ತಿಸುವುದರಿಂದ ಒಂದು ಪ್ಲಸ್‌ ಪಾಯಿಂಟ್‌ ಎಂದರೆ ಅವರು ನಿಮ್ಮ ಜೊತೆ ಎಲ್ಲಾ ವಿಷಯವನ್ನು ಶೇರ್‌ ಮಾಡಲಾರಂಭಿಸುತ್ತಾರೆ. ಇದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ತೋರಿಸಲು ಸಹಾಯವಾಗುವುದು.

5. ಸಮ್ಮರ್‌ ಕ್ಯಾಂಪ್‌ ಎಂಬ ಒತ್ತಾಯದ ಹೇರಿಕೆ ಬೇಡ:
ರಜೆಯಲ್ಲಿ ಸುಮ್ಮನೆ ಕೂತು ಏನು ಮಾಡುತ್ತೀಯ , ಆ ಮಕ್ಕಳು ಸಮ್ಮರ್‌ಕ್ಯಾಂಪ್‌ಗೆ ಹೋಗುತ್ತಿದ್ದಾರೆ ನೀನೂ ಹೋಗು ಎಂದು ಒತ್ತಾಯ ಮಾಡಬೇಡಿ. ಅವರಿಗೆ ಇಷ್ಟವಿದ್ದರೆ ಮಾತ್ರ ಕಳುಹಿಸಿ. ಇಲ್ಲದಿದ್ದರೆ ಒಳ್ಳೆಯ ಕತೆ ಪುಸ್ತಕ ತಂದುಕೊಡಿ. ಅವರಿಗೆ ಇಷ್ಟವಾಗಿದ್ದನ್ನು ಮಾಡಲು ಅವಕಾಶ ಕಲ್ಪಿಸಿ, ಈ ರಜೆಯಲ್ಲಿ ಸ್ವಲ್ಪ ರಿಲ್ಯಾಕ್ಸ್ ಆಗಲು ಬಿಡಿ. ಮುಂದಿನ ವರ್ಷದ ವಿಷಯಗಳಿಗೆ ಈಗಲೇ ಟ್ಯೂಷನ್ ಕೊಡಿಸಿ ಅವರ ರಜೆಯ ಖುಷಿ ಕಿತ್ಕೊಳ್ಳಬೇಡಿ.... ಈ ಬೇಸಿಗೆ ರಜೆಯನ್ನು ಅವರು ಖುಷಿ-ಖುಷಿಯಿಂದ ಕಲಿಯುವಂತಾಗಲಿ... ಈ ಮಾತುಗಳನ್ನು ನೀವೂ ಒಪ್ಪುತ್ತೀರಿ ತಾನೆ?


 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries