HEALTH TIPS

ಕೇಂದ್ರ ಸರಕಾರದ ಪ್ರತಿಕೂಲ ನೀತಿ ಕ್ರಮಗಳಿಂದ ಕೇರಳ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ: ರಾಜ್ಯ ಹಣಕಾಸು ಸಚಿವ ಬಾಲಗೋಪಾಲ್

 

            ತಿರುವನಂತಪುರ: ಕೇಂದ್ರ ಸರಕಾರದ ಪ್ರತಿಕೂಲ ನೀತಿ ಕ್ರಮಗಳಿಂದ ಕೇರಳ ಆರ್ಥಿಕ ಸಂಕಷ್ಟಕ್ಕೆ ಎದುರಿಸುತ್ತಿದೆ ಎಂದು ರಾಜ್ಯ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್ ಶುಕ್ರವಾರ ಹೇಳಿದ್ದಾರೆ.

                 2022-23ನೇ ಹಣಕಾಸು ವರ್ಷದ ಕೊನೆಯ ದಿನದಂದು ಇಲ್ಲಿ ಮಾಧ್ಯಮದವರನ್ನು ಭೇಟಿ ಮಾಡಿದ ಬಾಲಗೋಪಾಲ್, ಕೇಂದ್ರದ ನೀತಿಗಳಿಂದಾಗಿ ಈ ಹಣಕಾಸು ವರ್ಷದಲ್ಲಿ 40,000 ಕೋಟಿ ರೂ. ಕೊರತೆ ಉಂಟಾಗಿದೆ ಎಂದರು.

                   ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಕೇರಳವು ಆದಾಯ ಹಾಗೂ ವೆಚ್ಚದಲ್ಲಿ ಉತ್ತಮ ನಿರ್ವಹಣೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

                'ವೇತನ, ಪಿಂಚಣಿ ಹಾಗೂ , ಸಾಲ ಮರುಪಾವತಿ ಸೇರಿದಂತೆ ಎಲ್ಲವನ್ನೂ ಸರಿಯಾಗಿ ಪಾವತಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಯೋಜನಾ ವೆಚ್ಚ ಶೇ.96ಕ್ಕಿಂತ ಹೆಚ್ಚಿದೆ. ಹಲವು ಪಂಚಾಯಿತಿಗಳು ಶೇ. 100ರಷ್ಟು ನಿಧಿಯನ್ನು ಖರ್ಚು ಮಾಡಿದ್ದು, ಖಜಾನೆಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಬಾಲಗೋಪಾಲ್ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries