ಪಾಲಕ್ಕಾಡ್: ರೈಲಲ್ಲಿ ಪಟಾಕಿ ಸಹಿತ ಸಿಡಿಮದ್ದು ಮುಂತಾದವುಗಳನ್ನು ಅಕ್ರಮವಾಗಿ ಸಾಗಾಟ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಪಟಾಕಿ ಕಳ್ಳಸಾಗಣೆ ವೇಳೆ ಸಿಕ್ಕಿಬಿದ್ದರೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸೂಚನೆ ನೀಡಲಾಗಿದೆ. ಇತ್ತೀಚೆಗೆ ಏಳತ್ತೂರಲ್ಲಿ ನಡೆದ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೇ ಎಚ್ಚರಿಕೆ ನೀಡಿದೆ.
ಪಟಾಕಿಯಂತಹ ಅಪಾಯಕಾರಿ ವಸ್ತುಗಳನ್ನು ರೈಲಿನಲ್ಲಿ ಸಾಗಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಆದ್ದರಿಂದ, ಆರ್.ಪಿ.ಎಫ್ ನಿಂದ ಈ ವಿಷಯದ ಬಗ್ಗೆ ಠಾಣೆ ಕೇಂದ್ರಿತ ಜಾಗೃತಿ ಮತ್ತು ತಪಾಸಣೆ ನಡೆಸಲಾಗುತ್ತದೆ. ಪಾಲಕ್ಕಾಡ್ ವಿಭಾಗೀಯ ಭದ್ರತಾ ಆಯುಕ್ತರ ಸೂಚನೆ ಮೇರೆಗೆ ತಪಾಸಣೆ ಆರಂಭಿಸಲಾಗಿದೆ.
ರೈಲಲ್ಲಿ ಸಿಡಿಮದ್ದು ಸಾಗಿಸಿದರೆ ಕಾದಿದೆ ಕಷ್ಟ: ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ; ಭಾರತೀಯ ರೈಲ್ವೆ ಎಚ್ಚರಿಕೆ
0
April 11, 2023