ಕೇರಳದ ಐಎಸ್ ನೇಮಕಾತಿಯ ಕಥೆ ಹೇಳುವ ದಿ ಕೇರಳ ಸ್ಟೋರಿ ಚಿತ್ರದ ಬಗ್ಗೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದು, ಎಸ್‍ಡಿಪಿಐ ಪ್ರತಿಭಟಿಸಿದೆ. ಕೇರಳ ಸ್ಟೋರಿ ರಾಜ್ಯದ ಸೌಹಾರ್ದ ವಾತಾವರಣವನ್ನು ಮುರಿಯುವ ಚಿತ್ರವಾಗುವ ಸಾಧ್ಯತೆ ಇದೆ ಎನ್ನಲಾಗಿದೆÉ.
ಇದೀಗ ಈ ಚಿತ್ರದ ಬಗ್ಗೆ ಬೃಹತ್ ಮಟ್ಟದ ಅಪಪ್ರಚಾರಗಳು ಸಾಗಿವೆ. ಪತ್ರಿಕಾಗೋಷ್ಠಿಯಲ್ಲಿ ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ಕೆ.ಕೆ.ರೈಹಾನತ್ ಮಾತನಾಡಿ, ಚಿತ್ರವು ಫ್ಯಾಸಿಸ್ಟ್ ರಾಜಕಾರಣದ ಪರವಾಗಿದ್ದು, ಹೀಗಾಗಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು. ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ರೈಹಾನಾಥ್ ಒತ್ತಾಯಿಸಿದರು.
ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ. ಚಿತ್ರದ ಕಥಾವಸ್ತುವು ಕೇರಳದ ಮುಸ್ಲಿಮೇತರ ಮಹಿಳೆಯರನ್ನು ಪ್ರೀತಿಸಿ ತಮ್ಮ ಧರ್ಮವನ್ನು ಬದಲಿಸಿ ನಂತರ ಐಎಸ್ ಐಎಸ್ ಗೆ ಸೇರಿ ಭಯೋತ್ಪಾದನೆಯಲ್ಲಿ ತೊಡಗುತ್ತಾರೆ. ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ವಿಪುಲ್ ಅಮೃತಲಾಲ್ ಶಾ ಕೇರಳ ಸ್ಟೋರಿಯ ನಿರ್ಮಾಪಕರು. ನಿರ್ದೇಶಕ ಸುದೀಪೆÇ್ತೀ ಸೇನ್. ಇನ್ನು 20 ವರ್ಷಗಳಲ್ಲಿ ಕೇರಳ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂಬ ಮಾಜಿ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಹೇಳಿಕೆಯನ್ನೂ ಚಿತ್ರದ ಟ್ರೈಲರ್ ಉಲ್ಲೇಖಿಸಿದೆ. ಕೇರಳದ 32,000 ಮಹಿಳೆಯರನ್ನು ಕಳ್ಳಸಾಗಣೆ ಮಾಡಿ ಮತಾಂತರ ಮಾಡುವ ಹೃದಯವಿದ್ರಾವಕ ದೃಶ್ಯಗಳನ್ನು ಈ ಚಿತ್ರ ಆಧರಿಸಿದೆ. ಚಿತ್ರವು ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಇದೆಲ್ಲ ತಪ್ಪು ಎಂದು ಎಸ್ ಡಿಪಿಐ ಹೇಳುತ್ತಿದ್ದು, ಪೈಪೆÇೀಟಿ ನೀಡಲಿದೆ.





