HEALTH TIPS

ಮತದಾರರ ಚೀಟಿಯೊಂದಿಗೆ ಆಧಾರ್‌ ಲಿಂಕ್ ಪ್ರಕ್ರಿಯೆ ಪ್ರಾರಂಭವಾಗಿಲ್ಲ: ಕಿರಣ್ ರಿಜಿಜು

 

                   ನವದೆಹಲಿ: 'ಮತದಾರರ ಚೀಟಿಗೆ ಆಧಾರ್‌ ಕಾರ್ಡ್‌ ಜೋಡಿಸುವ ಕಾರ್ಯ ಇನ್ನಷ್ಟೇ  ಆರಂಭವಾಗಬೇಕಿದೆ' ಎಂದು ಕಾನೂನು ಸಚಿವ ಕಿರಣ್‌ ರಿಜಿಜು ರಾಜ್ಯಸಭೆಗೆ ಗುರುವಾರ ತಿಳಿಸಿದರು. 'ಇದೊಂದು ನಿರಂತರ ಕಾರ್ಯಕ್ರಮವಾಗಿದ್ದು, ಈ ಜೋಡಣೆಗೆ ಯಾವುದೇ ಕಾಲ ಮಿತಿ ಇರುವುದಿಲ್ಲ' ಎಂದೂ ಹೇಳಿದರು.

                 'ಒಂದು ವೇಳೆ ಮತದಾರರ ಚೀಟಿಯೊಂದಿಗೆ ಆಧಾರ್‌ ಕಾರ್ಡ್‌ ಜೋಡಣೆಯಾಗಿಲ್ಲ ಎಂದಾದರೆ ಅಂಥವರೂ ಖಂಡಿತವಾಗಿ ಚುನಾವಣೆಯಲ್ಲಿ ಮತದಾನ ಮಾಡಬಹುದು' ಎಂದರು.

                 'ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಅಂದಾದರೆ ಚುನಾವಣಾ ನೋಂದಣಾಧಿಕಾರಿಗೆ ವ್ಯಕ್ತಿಯು ತನ್ನ ಗುರುತು ದೃಢೀಕರಣಕ್ಕೆ ಆಧಾರ್‌ ಕಾರ್ಡ್ ಸಂಖ್ಯೆಯನ್ನು ನೀಡಬಹುದು ಎನ್ನವ ಅವಕಾಶವನ್ನು ಚುನಾವಣಾ ಕಾನೂನು (ತಿದ್ದುಪಡಿ) ಕಾಯ್ದೆ 2021ರಲ್ಲಿ ನೀಡಲಾಗಿದೆ. ಮತದಾರರ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಸಂಗ್ರಹಿಸುವ ಕಾರ್ಯಕ್ರಮವನ್ನು ಚುನಾವಣಾ ಆಯೋಗವು 2022ರ ಆಗಸ್ಟ್‌ 1ರಲ್ಲಿಯೇ ಪ್ರಾರಂಭಿಸಿದೆ' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries