ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಅಣಂಗೂರು ಉಪ ಸಂಘ ಮತ್ತು ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ವೃಂದ ಅಣಂಗೂರು ಇದರ 12 ನೇ ವಾರ್ಷಿಕೋತ್ಸವ ಮತ್ತು ಮಹಾಸಭೆ ಎ.16 ರಂದು ಮಧ್ಯಾಹ್ನ 2.30 ರಿಂದ ಅಣಂಗೂರಿನ ಶ್ರೀ ಶಾರದಾಂಬಾ ಸಭಾ ಭವನದಲ್ಲಿ ನಡೆಯಲಿದೆ.
ಅಣಂಗೂರು ಉಪಸಂಘದ ಅಧ್ಯಕ್ಷ ಕೆ.ಕಮಲಾಕ್ಷ ಅಣಂಗೂರು ಅಧ್ಯಕ್ಷತೆ ವಹಿಸುವರು. ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪೆÇ್ರ.ಡಾ.ಬಾಲಕೃಷ್ಣ ಶ್ರೀನಿವಾಸ ಮದ್ದೋಡಿ ದೀಪ ಪ್ರಜ್ವಲನಗೈದು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಅಭಿಜ್ಞ್ಯ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ನಿರ್ದೇಶಕ ಅಭಿಲಾಷ್ ಕ್ಷತ್ರಿಯ, ರಾಮಕ್ಷತ್ರಿಯ ಭಜನಾ ವೃಂದ ಉಡುಪಿ ಇದರ ಸದಸ್ಯೆ ಜಯಶ್ರೀ ಯಶವಂತ್ ಭಾಗವಹಿಸುವರು. ಜಿಲ್ಲಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಉಷಾ ನವೀನ್‍ಚಂದ್ರ, ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ವೃಂದದ ಅಧ್ಯಕ್ಷೆ ಬಬಿತಾ ಸಂತೋಷ್, ಜಿಲ್ಲಾ ಯುವ ಸಂಘದ ಅಧ್ಯಕ್ಷ ಅಕ್ಷತ್, ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ವೃಂದದ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ ಉಪಸ್ಥಿತರಿರುವರು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಅಣಂಗೂರು ಉಪ ಸಂಘದ ಮಹಾಸಭೆ
0
ಏಪ್ರಿಲ್ 07, 2023

