ಕಾಸರಗೋಡು: ಉದುಮ ಗ್ರಾ.ಪಂ.ನ 2022-23ನೇ ಸಾಲಿನ ವಾರ್ಷಿಕ ಯೋಜನೆಯಾಗಿ ಅನುಷ್ಠಾನಗೊಂಡಿರುವ ಎಮ್ಮೆ ಸಾಕಾಣಿಕೆ ಯೋಜನೆಯನ್ನು ವಿನೀತಾ ಭಾಸ್ಕರನ್ ಅವರಿಗೆ ಆರು ಎಮ್ಮೆ ಕರುಗಳನ್ನು ನೀಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ ಉದ್ಘಾಟಿಸಿದರು. ಸ್ವಂತ ಹಟ್ಟಿ ಹೊಂದಿರುವ ಎಂಟು ಆಯ್ದ ರೈತರಿಗೆ ಒಂದು ಎಮ್ಮೆ ಕರು ಖರೀದಿಸಲು ತಲಾ ರೂ.8000 ಆರ್ಥಿಕ ನೆರವು ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬೀಬಿ ವಹಿಸಿದ್ದರು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜೈನಬಾ ಅಬೂಬಕರ್, ವಾರ್ಡ್ ಸದಸ್ಯೆ ಕಸ್ತೂರಿ ಬಾಲನ್, ನಬೀಸಾ ಪಾಕ್ಯಾರ ಮಾತನಾಡಿದರು. ಪಂಚಾಯತ್ ಹಿರಿಯ ಪಶು ವೈದ್ಯಾಧಿಕಾರಿ ಡಾ.ಇ.ಚಂದ್ರಬಾಬು ಸ್ವಾಗತಿಸಿ, ಉದುಮ ಪಶುವೈದ್ಯಕೀಯ ಉಪಕೇಂದ್ರದ ಲೈವ್ ಸ್ಟಾಕ್ ಇನ್ಸ್ ಪೆಕ್ಟರ್ ಎಸ್. ಅರುಣ್ ಲಾಲ್ ವಂದಿಸಿದರು.
ಎಮ್ಮೆ ಸಾಕಾಣಿಕೆ ಯೋಜನೆ ಉದ್ಘಾಟನೆ
0
April 07, 2023