HEALTH TIPS

ವಾಣಿಜ್ಯೋದ್ಯಮ ವರ್ಷ: ಜಿಲ್ಲೆಯಲ್ಲಿ ವಿವಿಧ ಚಟುವಟಿಕೆಗಳಿಗೆ ಚಾಲನೆ


         ಕಾಸರಗೋಡು: 2022-23ನೇ ಹಣಕಾಸು ವರ್ಷವನ್ನು ವಾಣಿಜ್ಯೋದ್ಯಮ ವರ್ಷವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿವಿಧ ಚಟುವಟಿಕೆ ಆಯೋಜಿಸಲಾಗಿದೆ.
               ಪ್ರತಿ ಸ್ಥಳೀಯಾಡಳಿತ ಸಂಸ್ಥೆಯಲ್ಲಿ ಉದ್ಯಮಶೀಲತಾ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ತರಬೇತಿದಾರರನ್ನು ನೇಮಿಸುವ ಮೂಲಕ ಉದ್ಯಮಶೀಲ ಕ್ಷೇತ್ರಕ್ಕೆ ಪ್ರವೇಶಿಸುವ ಜನರಿಗೆ ಸಹಾಯ ಒದಗಿಸಲಗುತ್ತಿದೆ. ಮೊದಲ ಹಂತದಲ್ಲಿ ತಳಮಟ್ಟಉದ್ಯಮಿಗಳಿಗೆ ಜನಜಾಗೃತಿ ವಿಚಾರ ಸಂಕಿರಣ ನಡೆಸಲಾಗಿದ್ದು, ವಿಚಾರ ಸಂಕಿರಣದಲ್ಲಿ ಸುಮಾರು ಐದು ಸಾವಿರ ಮಂದಿ ಭಾಗವಹಿಸಿದ್ದರು. ಪ್ರತಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಾಲ, ಪರವಾನಗಿ, ಸಹಾಯಧನ ಮೇಳವನ್ನು ನಡೆಸಲಗಿದ್ದು,  ಕೈಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಪ್ರತಿಯೊಬ್ಬ ಉದ್ಯಮಿಯನ್ನು ಲಿಂಕ್ ಮಾಡುವ ಮೂಲಕ ಚಟುವಟಿಕೆಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ಪ್ರಾರಂಬಿಸಲಾಗಿದೆ. ಈ ಮೂಲಕ ನಾಲ್ಕು ಸಾವಿರಕ್ಕೂ ಹೆಚ್ಚು ಉದ್ಯಮಗಳು ಹುಟ್ಟಿಕೊಂಡಿವೆ. ಮುಖ್ಯವಾಗಿ ಆಹಾರ ಸಂಸ್ಕರಣಾ ವಲಯದಲ್ಲಿ ಹೆಚ್ಚಿನ ಉದ್ಯಮಿಗಳು ಮುಂದೆ ಬಂದಿದ್ದು, ಉಡುಪು ತಯರಿ, ಕಸೂತಿ ಕೆಲಸ, ವಿವಿಧ ರೀತಿಯ ಕರಕುಶಲ ಎಂಜಿನಿಯರಿಂಗ್ ಉತ್ಪನ್ನಗಳು, ಮರ ಆಧಾರಿತ ಉತ್ಪನ್ನಗಳು, ಐಟಿ ಸೇವೆಗಳು, ಬ್ಯೂಟಿ ಪಾರ್ಲರ್ ಮುಂತಾದ ಉತ್ಪಾದನೆ ಮತ್ತು ಸೇವಾ ವ್ಯಾಪಾರ ವಲಯಗಳಲ್ಲಿ ಉದ್ಯಮಗಳನ್ನು ಪ್ರಾರಂಭಿಸಲಾಗಿದೆ.
                ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ಥಳೀಯಾಡಳಿತದ ವಾರ್ಷಿಕ ಯೋಜನೆಯಲ್ಲಿ ಕೈಗಾರಿಕಾ ಉದ್ಯಮಗಳನ್ನು ಆರಂಭಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಇಲಾಖೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries