HEALTH TIPS

ಕ್ರೀಡಾತಾರೆ, ಸಂಸದೆ ಪಿ.ಟಿ ಉಷಾ ಅವರಿಗೆ ಮೊದಲ ಗೌರವ ಡಾಕ್ಟರೇಟ್: ಏ.10ಕ್ಕೆ ಪ್ರದಾನ

 
 

        ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ಭಾರತೀಯ ಕ್ರೀಡೆಯ ವಿಶಿಷ್ಟ ಪ್ರತಿಭೆ ಪಿ.ಟಿ. ಉಷಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭವನ್ನು ಏಪ್ರಿಲ್ 10ರಂದು ಸಂಜೆ 4ಕ್ಕೆ  ವಿಶ್ವ ವಇದ್ಯಾಳಯದ ಪೆರಿಯ ಕ್ಯಾಂಪಸ್‍ನ ಸಬರಮತಿ ಸಭಾಂಗಣದಲ್ಲಿ ಆಯೋಜಿಸಿದೆ.
                ಉಪಕುಲಪತಿ ಪೆÇ್ರಫೆಸರ್ ಎಚ್. ವೆಂಕಟೇಶ್ವರಲು  ಡಾ.ಗೌರವ ಡಾಕ್ಟರೇಟ್ ಪ್ರದಾನ ಮಾಡುವರು. ರಿಜಿಸ್ಟ್ರಾರ್ ಡಾ.ಎಂ.ಮುರಳೀಧರನ್ ನಂಬಿಯಾರ್ ಅಧ್ಯಕ್ಷತೆ ವಹಿಸುವರು. ಗೌರವ ಪದವಿ ಸವೀಕರಿಸಿ ಪಿ.ಟಿ. ಉಷಾ ಸಭಿಕರನ್ನುದ್ದೇಶಿಸಿ ಮಾತನಾಡುವರು.  ಡೀನ್ ಅಕಾಡೆಮಿಕ್ ಪೆÇ್ರಫೆಸರ್ ಅಮೃತ್ ಜಿ. ಕುಮಾರ್, ಪ್ರಭಾರಿ ಪರೀಕ್ಷಾ ನಿಯಂತ್ರಕ ಪೆÇ್ರ. ಎಂ.ಎನ್. ಮುಸ್ತಫಾ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಪ್ರಾಧ್ಯಾಪಕ ರಾಜೇಂದ್ರ ಪಿಲಾಂಗಟ್ಟೆ ಪಾಲ್ಗೊಳ್ಳುವರು.  ರಾಜ್ಯ ಸಭಾ ಸದಸ್ಯೆ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಘದ ಅಧ್ಯಕ್ಷೆಯಾಗಿರುವ ಪಿ.ಟಿ ಉಷಾ ಅವರು ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆ ಪರಿಗಣಿಸಿ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.  ಪಿ.ಟಿ ಉಷಾ ಅವರು ದೇಶದಲ್ಲಿ ಕ್ರೀಡಾ ಸಂಸ್ಕøತಿಗೆ ಭದ್ರ ಬುನಾದಿ ಹಾಕಿದ ರಾರೆಯಾಗಿದ್ದಾರೆ. ರಾಷ್ಟ್ರಕ್ಕೆ ಮಾದರಿಯಾದವರನ್ನು ಗೌರವಿಸುವುದು ವಿಶ್ವವಿದ್ಯಾಲಯದ ಕರ್ತವ್ಯವಾಗಿದೆ. ಪಿ.ಟಿ ಉಚಾ ಅವರ ಸಾಧನೆ ವಿದ್ಯಾರ್ಥಿಗಳಿಗೆ ಪ್ರಚೋದನೆಯಾಗಿದೆ ಎಂದು ಉಪಕುಲಪತಿ ಪೆÇ್ರಫೆಸರ್ ಎಚ್. ವೆಂಕಟೇಶ್ವರಲು ತಿಳಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries