HEALTH TIPS

ವಿಷು, ರಮ್ಜಾನ್ ಹಬ್ಬದ ಸಂಭ್ರಮ: ಕಾಸರಗೋಡಿನಲ್ಲಿ ಬೀದಿಬದಿ ವ್ಯಾಪಾರ ಭಾರೀ ಸಂದಣಿ


                    ಕಾಸರಗೋಡು: ಜಿಲ್ಲೆ ವಿಷು ಹಾಗೂ ರಮ್ಜಾನ್ ಹಬ್ಬದ ಸಂಭ್ರಮದಲ್ಲಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗತೊಡಗಿದೆ. ಬೀದಿಬದಿ ವ್ಯಾಪಾರದ ಜತೆಗೆ ಸರ್ಕಾರದ ನಾಗರಿಕ ಪೂರೈಕೆ ಇಲಾಖೆಯ ಸಪ್ಲೈಕೋ ವತಿಯಿಂದ ವಿಶೇಷ ಮಾರಾಟ ಮಳಿಗೆ ಕಾರ್ಯಾಚರಿಸುತ್ತಿದ್ದು, ಸಾಮಗ್ರಿ ಖರೀದಿಗೆ ಜನತೆ ಮುಗಿ ಬೀಳುತ್ತಿದ್ದಾರೆ.
         ಹಬ್ಬಗಳಿಗೆ ಹೊಸ ಬಟ್ಟೆ, ಪಾದರಕ್ಷೆ, ಹಣ್ಣುಹಂಪಲು, ತರಕಾರಿ, ದಿನಸಿ ಸಾಮಗ್ರಿಗಳ ಖರೀದಿಯೂ ಜೋರಾಗಿದೆ. ಇನ್ನು ಕುಟುಂಬಶ್ರೀ ಘಟಕಗಳ ವತಿಯಿಂದ ತರಕಾರಿ, ಹಣ್ಣುಹಂಪಲು ಮಾರಾಟಕೇಂದ್ರಗಳೂ ಕಾರ್ಯಾಚರಿಸುತ್ತಿದ್ದು, ಗ್ರಾಹಕರಿಗೆ ಎಲ್ಲ ಸಾಮಗ್ರಿ ಒಂದೇ ಕಡೆ ಲಭ್ಯವಾಗುವಂತೆ ಇದು ಸಹಕಾರಿಯಾಗಿದೆ. ವಿಷರಹಿತ ತರಕಾರಿ ಎಂಬ ಘೋಷಣೆಯೊಂದಿಗೆ ಕುಟುಂಬಶ್ರೀ ಘಟಕಗಳು ಕೆಲವೆಡೆ ತರಕಾರಿ ಮಾರಾಟ ನಡೆಯುತ್ತಿದ್ದರೂ, ಇದರಲ್ಲಿ ಬಹುತೇಕ ಇತರ ರಾಜ್ಯಗಳಿಂದ ಮಾರುಕಟ್ಟೆಗೆ ಆಗಮಿಸಿದ ತರಕಾರಿಯನ್ನೇ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ದೂರೂ ಕೇಳಿಬರುತ್ತಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries